Connect with us

LATEST NEWS

ಯುವತಿಗೆ ಕಿರುಕುಳ ಪ್ರಶ್ನಿಸಿದವನೇ ಮೇಲೆಯೆ ಹಲ್ಲೆ

ಯುವತಿಗೆ ಕಿರುಕುಳ ಪ್ರಶ್ನಿಸಿದವನೇ ಮೇಲೆಯೆ ಹಲ್ಲೆ

ಮಂಗಳೂರು ಸಪ್ಡೆಂಬರ್ 27: ಬಸ್ಸಿನಲ್ಲಿ ಯುವತಿಗೆ ಕಿರುಕುಳ ನೀಡುತ್ತಿರುವುದನ್ನು ಆಕ್ಷೇಪಿಸಿದ ಬಸ್ ನಿರ್ವಾಹಕನನ್ನೆ ಯುವಕನೋರ್ವ ಧಳಿಸಿದ ಮಂಗಳೂರಿನಲ್ಲಿ ನಡೆದಿದೆ. ನಗರ ಹೊರವಲಯದ ಸುರತ್ಕಲ್ ಸಮೀಪದ ಕಾನ ಎಂಬಲ್ಲಿ ಈ ಘಟನೆ ನಡೆದಿದೆ.  ಯುವಕನೋಬ್ಬ ಬಸ್ ನಲ್ಲಿ ಪ್ರಯಾಣಿಸುತ್ತಿದ ಸಂದರ್ಭ ಮಹಿಳೆರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಆ ಯುವಕನನ್ನು ಬಸ್ ಕಂಡಕ್ಟರ್ ಕಿರಣ ಎಂಬವರು ಇದನ್ನು ಪ್ರಶ್ನಿಸಿದ್ದಾರೆ.

ಈ ಸಂದರ್ಭ ರೊಚ್ಚಿಗೆದ್ದ ಯುವಕ ಕಂಡಕ್ಟರ್  ಕಿರಣ್ ಅವರನ್ನು ಬಸ್ಸಿನಲ್ಲೆ ಎಳೆದಾಡಿ ಹಿಗ್ಗಾ ಮುಗ್ಗ ಥಳಿಸಿದ್ದಾರೆ ಎಂದು ದೂರಲಾಗಿದೆ.  ಇನ್ನು ಮುಂದೆ ಈ ಬಸ್ ನಲ್ಲಿ ಕರ್ತವ್ಯ ಮುಂದುವರಿಸಿದಲ್ಲಿ ನೋಡಿ ಕೊಳ್ಳತ್ತೆನೆ ಎಂಬುದಾಗಿ ಆ ಯುವಕ ಬೆದರಿಕೆ ಹಾಕಿದ್ದಾನೆ.  ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಗೊಳಗಾದ ಬಸ್ ನಿರ್ವಾಹಕ ಕಿರಣ್ ಹಿಂದೂ ಜಾಗರಣಾ ವೇದಿಕೆಯ ಸದಸ್ಯ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಮತ್ತು ನಗರ ಪ್ರಮುಖ್ ಸುಭಷ್ ಪಡೀಲ್, ಶರತ್ ಪದವಿನಂಗಡಿ,  ಬಾಲಕೃಷ್ಣ ಮುಂಚೂರು,  ಸತೀಶ್ ಮೂಂಚೂರು ಪುಷ್ಪರಾಜ್ ಕುಳಾಯಿ,  ಭರತ್ ಅಗರಮೇಲು,  ರೂಪೇಶ್ ಇಡ್ಯ, ಸಂತೋಷ್ ಮುಂಚೂರು ಸೇರಿ ಕಾರ್ಯಕರ್ತರು ಆಸ್ಪತ್ರೆ ದೌಡಯಿಸಿ ಘಟನೆಯ ಕುರಿತು ವಿವರಣೆ ಪಡೆದಿದ್ದಾರೆ.

Share Information
Advertisement
Click to comment

You must be logged in to post a comment Login

Leave a Reply