LATEST NEWS
ನೇಪಾಳದಂತ ಸಣ್ಣ ದೇಶವೂ ಕೂಡ ಭಾರತದ ವಿರುದ್ದ ಹಗೆ ಸಾಧಿಸುತ್ತಿದೆ – ಖಾದರ್

ಮಂಗಳೂರು ಜೂನ್ 16: ನೇಪಾಳದಂಥ ಸಣ್ಣ ದೇಶವೂ ಕೂಡ ಈಗ ಭಾರತದ ವಿರುದ್ಧ ಪ್ರಶ್ನೆ ಮಾಡುವಂತ ಪರಿಸ್ಥಿತಿ ಬಂದೊಗಿದ್ದು, 56 ಇಂಚಿನ ಎದೆಗಾರಿಕೆಯವರು ಈಗ ಯಾಕೆ ಮೌನವಹಿಸಿದ್ದಾರೆ ಎಂದು ಶಾಸಕ ಯು.ಟಿ ಖಾದರ್ ಪ್ರಶ್ನೆ ಮಾಡಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಚೀನಾ ಸೈನಿಕರು ಈಗ ಭಾರತದ ಒಳಕ್ಕೆ ಬಂದು ಕೂತಿದ್ದಾರೆ. ನಮ್ಮ ಭೂಬಾಗಕ್ಕೆ ಬಂದು ನಮ್ಮ ಸೈನಿಕರನ್ನು ಕೊಲ್ಲುತ್ತಿದ್ದಾರೆ. ಈಗ ಯಾಕೆ 56 ಇಂಚಿನ ಎದೆಗಾರಿಕೆಯವರು ಮೌನವಾಗಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇದ್ದಾಗ ಮೌನಿ ಬಾಬಾ ಎನ್ನುತ್ತಿದ್ದವರು ಇಷ್ಟೆಲ್ಲಾ ಅವಾಂತರ ಮಾಡಿದರೂ ಈಗೆಲ್ಲಿದ್ದಾರೆ. ಮನೆಗೆ ಹೊಕ್ಕಿ ಹೊಡೆಯುವುದಾಗಿ ಭಾಷಣ ಮಾಡಿದ್ದವರು ಮೌನವಾಗಿದ್ದು ಏಕೆ ? ನಮ್ಮ ಸೈನಿಕರು ಹುತಾತ್ಮರಾಗಿರುವಾಗ ಹೊಡೆಯಬೇಕಿತ್ತಲ್ವಾ.. ಯಾಕೆ ಸುಮ್ಮನೆ ಕುಳಿತಿದ್ದಾರೆ ? ಎಂದು ಮಾಜಿ ಸಚಿವ ಯು.ಟಿ ಖಾದರ್ ಪ್ರಶ್ನಿಸಿದ್ದಾರೆ.
