LATEST NEWS
ಸೇನೆ ಕಾರ್ಯಾಚರಣೆಯನ್ನು ರಾಜಕೀಯಕ್ಕೆ ಬಳಸಿದವರನ್ನು ಪ್ರಶ್ನೆ ಮಾಡಿ – ಖಾದರ್

ಸೇನೆ ಕಾರ್ಯಾಚರಣೆಯನ್ನು ರಾಜಕೀಯಕ್ಕೆ ಬಳಸಿದವರನ್ನು ಪ್ರಶ್ನೆ ಮಾಡಿ – ಖಾದರ್
ಮಂಗಳೂರು ಮಾರ್ಚ್ 6: ಕಾಂಗ್ರೇಸ್ ಗೆ ಭಯೋತ್ಪಾದಕ ಚಿಂತೆ ಎಂದು ಆರೋಪಿಸಿದ್ದ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆಗೆ ಸಚಿವ ಖಾದರ್ ತಿರುಗೇಟು ನೀಡಿದ್ದಾರೆ.
ಸೇನೆ ವಿಚಾರವನ್ನು ಯಾರೂ ರಾಜಕೀಯ ಮಾಡಬಾರದು ಆದರೆ ಯಡಿಯೂರಪ್ಪ ಸೇನೆ ಕಾರ್ಯಾಚರಣೆಯಲ್ಲಿ ರಾಜಕೀಯಕ್ಕೆ ಬಳಸಿದ್ದಾರೆ. ರಾಜಕೀಯಕ್ಕೆ ಬಳಸಿದವರನ್ನ ಕೋಟ ಶ್ರೀನಿವಾಸ ಪೂಜಾರಿ ಕೇಳಬೇಕಿತ್ತು, ಯಡಿಯೂರಪ್ಪರನ್ನು ಪ್ರಶ್ನೆ ಮಾಡುವ ಬದಲು ನನ್ನನ್ನು ಕೇಳಿದರೆ ಆಗುತ್ತಾ ? ಯಡಿಯೂರಪ್ಪನವರಿಗೆ ಯಾಕೆ ಶ್ರೀನಿವಾಸ ಪೂಜಾರಿ ಹೆದರ್ತಾರೋ ಗೊತ್ತಿಲ್ಲ ನಾನು ಅಂದ್ಕೊಂಡಿದ್ದೆ ಶ್ರೀನಿವಾಸ ಪೂಜಾರಿಯವರು ಧೈರ್ಯವಂತರು ಎಂದು ಹೇಳಿದರು.

ಉಗ್ರಗಾಮಿ,ಪ್ರತ್ಯೇಕವಾದಿಗಳಿಗೆ ಬೆಂಬಲ ನೀಡುವ ಪಿಡಿಪಿ ಜೊತೆ ಯಾಕೆ ಬಿಜೆಪಿ ಅಧಿಕಾರ ನಡೆಸಿತ್ತು ? 300 ಕೆಜಿ RDX ಕೊಂಡೊಯ್ಯುವುದಾದರೆ ಕೇಂದ್ರದ ಇಂಟಲಿಜೆನ್ಸ್ ಎಲ್ಲಿ ಹೋಯ್ತು , ಇಲ್ಲಿ ಒಂದು ಲೋಡ್ ಮರಳು ಕೊಂಡೋಗಾದಾದರೂ ಕಷ್ಟಪಡಬೇಕು ವ್ಯಂಗ್ಯವಾಡಿದರು.