ಸಿದ್ದರಾಮಯ್ಯರಿಗೆ ಭಯ ಹುಟ್ಟಿಸಿದೆಯಾ ರಾಹುಲ್ ಗಾಂಧಿ ಇಟ್ಟಿರೋ ತಿಲಕ ?

ಮಂಗಳೂರು ಮಾರ್ಚ್ 6: ನನಗೆ ಉದ್ದದ್ದ ನಾಮ ಇಟ್ಟುಕೊಂಡವರನ್ನು ನೋಡಿದರೆ ಭಯವಾಗುತ್ತದೆ ಎಂದು ಬಿಜೆಪಿ ಕಾಲೆಳೆಯಲು ಹೋದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಪೇಚಿಗೆ ಸಿಕ್ಕಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ #SelfieWithTilak ಎಂದು ನೆಟ್ಟಿಗರು ಕಾಲೆಳೆದಿದ್ದು, ಕಾಂಗ್ರೇಸ್ ಅಧ್ಯಕ್ಷ ರಾಹುಲ್ ಗಾಂಧಿ ಉದ್ದದ ತಿಲಕ ಇಟ್ಟಿರೋ ಪೋಟೋಗಳು ವೈರಲ್ ಆಗಿದ್ದು, ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ಇಟ್ಟಿರೋ ತಿಲಕ ಕೂಡ ಭಯ ಹುಟ್ಟಿಸಿದೆ ಎಂದು ಕಾಲೆಳೆದಿದ್ದಾರೆ.

ಬಾದಾಮಿ ವಿಧಾನಸಭಾ ಕ್ಷೇತ್ರದ ಕೆಂದೂರು ಕೆರೆಗೆ ನೀರು ತುಂಬಿಸುವ ಯೋಜನೆ ಚಾಲನೆ ನೀಡುವ ಸಮಾರಂಭದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಯಾಕೋ ಗೊತ್ತಿಲ್ಲ ನನಗೆ ಹಣೆಗೆ ಉದ್ದ ನಾಮ ಇಟ್ಟುಕೊಂಡವರನ್ನು ಕಂಡರೆ ಭಯವಾಗುತ್ತದೆ ಎಂದು ಹೇಳಿಕೆ ನೀಡಿದ್ದರು. ಬಿಜೆಪಿ ಪಕ್ಷವನ್ನು ಹಿಯಾಳಿಸಲು ಹೋಗಿ ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ತಿಲಕದಲ್ಲೂ ಸಿದ್ದರಾಮಯ್ಯ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಬಿಜೆಪಿಯವರ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ, ನಾನು ತಿಲಕ ಇಡಲ್ಲ ನಾನು ಹಿಂದೂ ಅಲ್ವಾ, ಉದ್ದ ನಾಮ‌ ಹಾಕಿದವರು ಬಿಜೆಪಿ, ಉದ್ದ ನಾಮ ಕಂಡ್ರೆ ಭಯ ಆಗುತ್ತದೆ. ತಿಲಕ ಅಂದ್ರೆ ಸಣ್ಣದಾಗಿ ಹಾಕಬೇಕು. ದೊಡ್ಡ ನಾಮ ಕಂಡ್ರೆ ಭಯ ಆಗುತ್ತದೆ ಎಂದು ಹೇಳಿದರು. ತಿಲಕ ಹಾಕದೆ ಇರೋರು ಹಿಂದೂಗಳು ಅಲ್ವಾ, ತಿಲಕ ಹಾಕಿದವರು ಮಾತ್ರ ಹಿಂದೂಗಳಾ? ಎಂದು ಪ್ರಶ್ನಿಸಿದರು.

Facebook Comments

comments