LATEST NEWS
ನಳಿನ್ ಮೂಲತಃ ಕಾಂಗ್ರೇಸ್ ಕಾರ್ಯಕರ್ತ.. ಕಾಂಗ್ರೆಸ್ ಕಾರ್ಯಕರ್ತರ ಭದ್ದತೆ ಹಾಗು ಶಕ್ತಿ ನಳಿನ್ ಗೆ ಹೊತ್ತಿದೆ – ಖಾದರ್

ಮಂಗಳೂರು ಡಿಸೆಂಬರ್ 07: ರಮಾನಾಥ ರೈ ಮತ್ತು ಯು.ಟಿ ಖಾದರ್ ಬಿಟ್ಟು ಕಾಂಗ್ರೇಸ್ ಕಾರ್ಯಕರ್ತರನ್ನು ಬಿಜೆಪಿಗೆ ಸೇರಿಸಿ ಎಂದ ಸಂಸದ ನಳಿನ್ ಕುಮಾರ್ ಹೇಳಿಕೆಗೆ ಶಾಸಕ ಖಾದರ್ ಸರಿಯಾಗಿ ತಿರುಗೇಟು ನೀಡಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಯು ಟಿ ಖಾದರ್, ನಳಿನ್ ಕುಮಾರ್ ಈ ಹಿಂದೆ ಕಾಂಗ್ರೇಸ್ ಕಾರ್ಯಕರ್ತರಾಗಿ ಕೆಲಸ ನಿರ್ವಹಿಸಿದ್ದರು, ಅಲ್ಲದೆ ಎನ್ ಎಸ್ ಯು ಐ ನಲ್ಲಿದ್ದಾಗ ವಿನಯ್ ಕುಮಾರ್ ಸೊರಕೆ ಪರ ದುಡಿದಿದ್ದರು, ಹಾಗಾಗಿ ಹಿಂದಿನದು ಇದೀಗ ಅವರಿಗೆ ನೆನಪಾಗುತ್ತಿದೆ. ಈ ಹಿನ್ನಲೆ ಬಿಜೆಪಿ ಬಿಟ್ಟು ನಳಿನ್ ಕಾಂಗ್ರೆಸ್ ಸೇರುವುದು ಒಳ್ಳೆಯದು ಎಂದು ಅವರು ಹೇಳಿದರು.

ಕಾಂಗ್ರೆಸ್ ಕಾರ್ಯಕರ್ತರ ಭದ್ದತೆ ಹಾಗು ಶಕ್ತಿ ನಳಿನ್ ಗೆ ಹೊತ್ತಿದೆ, ಕಾಂಗ್ರೆಸ್ ಅನ್ನು ಬಿಟ್ಟು ಬಿಜೆಪಿಗೆ ಸೇರಿದವರ ಚರಿತ್ರೆಯನ್ನು ಒಮ್ಮೆ ನೋಡಿಕೊಳ್ಳಲಿ, ಬಿಜೆಪಿಯಲ್ಲಿ ಅವರ ಪರಿಸ್ಥಿತಿ ಏನಾಗಿದೆ ಎಂಬುದನ್ನು ಯೋಚಿಸಿ ಎಂದರು.