LATEST NEWS
ನಾನು ಕಾಂಗ್ರೇಸ್ ಪ್ರಾಥಮಿಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೆನೆ…ಬೇರೆ ವಿಚಾರಗಳ ಬಗ್ಗೆ ಮೊದಲಿನ ಹಾಗೆ ಮಾತನಾಡ್ಲಿಕೆ ಆಗಲ್ಲ – ಖಾದರ್

ಮಂಗಳೂರು ಮೇ 25 : ವಿಧಾನಸಭೆಯಲ್ಲಿ ಸ್ಪೀಕರ ಸ್ಥಾನ ಅಲಂಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಮಂಗಳೂರಿಗೆ ಯು.ಟಿ ಖಾದರ್ ಅವರು ಆಗಮಿಸಿದ್ದು, ಅಭಿಮಾನಿಗಳು ಖಾದರ್ ಅವರನ್ನು ಆದರದಿಂದ ಸ್ವಾಗತಿಸಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಸಭಾಧ್ಯಕ್ಷ ಸ್ಥಾನದಲ್ಲಿ ಇದ್ದರೂ, ಉಳ್ಳಾಲ ಕ್ಷೇತ್ರದ ಸೇವೆ ಮಾಡ್ತೇನೆ. ಕ್ಷೇತ್ರದ ಜನರ, ಕಾರ್ಯಕರ್ತರ ಜೊತೆ ನಿಕಟ ಸಂಪರ್ಕ ಇರಲಿದೆ. ಈ ಸ್ಥಾನ ನನ್ನ ಸೇವೆಗೆ ಅಡ್ಡಿ ಬರಲ್ಲ, ನಾನು ಅದಕ್ಕೆ ಅಡ್ಡಿ ಪಡಿಸಲ್ಲ. ಈ ಹಂತಕ್ಕೆ ಬರಲು ಎಲ್ಲರ ಸಹಕಾರ, ಮಾರ್ಗದರ್ಶನವೇ ಕಾರಣ. ಈ ಗೌರವ ಉಳಿಸಿಕೊಂಡು ಜಿಲ್ಲೆಗೆ ಮತ್ತು ಕ್ಷೇತ್ರಕ್ಕೆ ಗೌರವ ತರುತ್ತೇನೆ ಎಂದು ಹೇಳಿದರು.

ನಾನು ಮಂತ್ರಿಯಾಗಿದ್ದರೆ ಒಂದು ಇಲಾಖೆಗೆ ಮಾತ್ರ ಮಂತ್ರಿಯಾಗಿರುತ್ತಿದ್ದೆ. ಈಗ ಎಲ್ಲಾ ಇಲಾಖೆಯ ಮಂತ್ರಿಗಳು ಕೂಡ ನನ್ನ ವ್ಯಾಪ್ತಿಗೆ ಬರುತ್ತಾರೆ. ಆ ಮೂಲಕ ನಾನು ಕೆಲಸ ಮಾಡಿಸೋದನ್ನ ಮಾಡುತ್ತೇನೆ. ಈ ಮೂಲಕ ಕ್ಷೇತ್ರದ ಜನರ ಜೊತೆ ನಿಕಟ ಸಂಬಂಧ ಉಳಿಸಿಕೊಂಡು, ಅಭಿವೃದ್ದಿ ಮಾಡುತ್ತೇನೆ ಎಂದಿದ್ದಾರೆ.
ಇನ್ನು ಇದೇ ವೇಳೆ ಹಿಜಾಬ್ ಸೇರಿ ಅನೇಕ ವಿಷಯಗಳ ಬಗ್ಗೆ ಸರ್ಕಾರದ ನಿಲುವು ವಿಚಾರ ಕೆಲವು ಸಂವಿಧಾನಬದ್ಧ ವಿಷಯಗಳು ಸುಪ್ರೀಂಕೋರ್ಟ್ನಲ್ಲಿವೆ. ನಾನು ಸರ್ಕಾರ ಸಂವಿಧಾನಕ್ಕೆ ವಿರುದ್ಧವಾಗಿ ಕೆಲಸ ಮಾಡಲ್ಲ. ಸ್ಪೀಕರ್ ಆದ ಹಿನ್ನೆಲೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಹೀಗಾಗಿ ಸಂವಿಧಾನ ಬದ್ಧವಾಗಿ ನನ್ನ ಅಭಿಪ್ರಾಯ ಹಂಚಿಕೊಳ್ಳುವೆ. ಸಭಾಧ್ಯಕ್ಷ ಸ್ಥಾನ ಉತ್ಸವ ಮೂರ್ತಿ ಅಲ್ಲ. ಪೀಠದಲ್ಲಿ ಕೂರುವವರು ಸರಿ ಇದ್ರೆ, ಎಲ್ಲವೂ ಸರಿ ಇರುತ್ತದೆ. ಶಿಷ್ಟಾಚಾರ ಎಂದೆನಿಲ್ಲ. ಜನರ ಪ್ರೀತಿಯೇ ಪ್ರೋಟೋಕಾಲ್, ಜನರಿಗೆ ನನ್ನನ್ನು ಭೇಟಿ ಮಾಡಲು ಅವಕಾಶ ಕೊಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.