DAKSHINA KANNADA
ಖಡಕ್ ಖಾಕಿಯಾ ಮಾನವೀಯತೆ ಇದು…!
ಮೂಡಬಿದ್ರೆ, ಅಕ್ಟೋಬರ್ 11: ಅಧಿಕಾರಿ ಮಾನವಿಯತೆ ತೋರಿ ಮಾದರಿಯಾಗಿದ್ದಾರೆ. ಇದು ನಡೆದದ್ದು ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆಯ ಕಡಂದಲೆ ಗ್ರಾಮದ ಉಮನಪಾಲು ಎಂಬಲ್ಲಿ.
ವಿಜಯ ಕರ್ಕೇರ (47ವ) ಕಳೆದ 3-4 ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ವಿಜಯ ಕರ್ಕೇರಾ ಮನೆಯಲ್ಲಿ ಕಾಣದಿದ್ದಾಗ, ಮನೆಯವರು ಹುಡುಕಾಡಿದ್ದಾರೆ. ಬಾವಿಯ ಬಳಿ ನೋಡಿದಾಗ ವಿಜಯ ಅವರ ವಸ್ತ್ರವಿರುವುದು ಕಂಡುಬಂದಿದ್ದು, ಬಾವಿಗೆ ಇಣುಕಿ ನೋಡಿದಾಗ ಮೃತದೇಹ ಪತ್ತೆಯಾಗಿದೆ.
ವಿಜಯ್ ಅವರ ಸಹೋದರ ಉದಯ ಪೂಜಾರಿ ಅವರು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ನಿರೀಕ್ಷರು ಬಿ.ಎಸ್.ದಿನೇಶ್ ಕುಮಾರ್ ಶವವನನ್ನು ಮೇಲಕ್ಕೆ ಎತ್ತಿದರು. ಬಾವಿಗೆ ಯಾರೂ ಇಳಿಯದಿದ್ದಾಗ, ಮೂಡುಬಿದಿರೆ ಪೊಲೀಸ್ ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ಬಾವಿಗಿಳಿದು, ಶವವನ್ನು ಶ್ರಮ ವಹಿಸಿ ಬಾವಿಯಿಂದ ಹೊರಗೆ ತೆಗೆದಿದ್ದಾರೆ. ಸಿಬ್ಬಂದಿಗಳು ಹಾಗೂ ಸ್ಥಳೀಯರು ಸಹಕರಿಸಿದ್ದಾರೆ. ಈ ಮೂಲಕ ಖಡಕ್ ಖಾಕಿ ಒಳಗೂ ಮಾನವೀಯತೆ ಇದೆ ಎಂಬುವುದನ್ನು ದಿನೇಶ್ ಅವರು ತೋರಿಸಿಕೊಟ್ಟಿದ್ದಾರೆ.