Connect with us

DAKSHINA KANNADA

ಕಡಬದಲ್ಲಿ ಚಿರತೆ ದಾಳಿ ಇಬ್ಬರು ಆಸ್ಪತ್ರೆಗೆ ದಾಖಲು

ಪುತ್ತೂರು ಫೆಬ್ರವರಿ 12: ಕಡಬ ತಾಲೂಕಿನ ರೆಂಜಿಲಾಡಿಯಲ್ಲಿ ಇಬ್ಬರ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ

ರೆಂಜಿಲಾಡಿ ಗ್ರಾಮದ ಹೇರ ಎಂಬಲ್ಲಿ ಮಧ್ಯರಾತ್ರಿ ವೇಳೆ ಈ ಘಟನೆ ಸಂಭವಿಸಿದೆ. ಹೇರ ನಿವಾಸಿಗಳಾದ ಚಂದ್ರಶೇಖರ ಹಾಗೂ ಸೌಮ್ಯ ಕಾಮತ್ ಅವರು ಕೃಷಿ ತೋಟಕ್ಕೆ ನೀರು ಹಾಯಿಸಲು ರಾತ್ರಿ ಸ್ಪಿಂಕ್ಲೇರ್ ಬದಲಾಯಿಸುವ ಕೆಲಸದಲ್ಲಿ ತೊಡಗಿದ್ದಾಗ ಚಿರತೆ ದಾಳಿ ನಡೆಸಿದೆ. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾಳಿ ಮಾಡಿದ ಚಿರತೆ ತೋಟದಲ್ಲಿ ಅವಿತುಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ. ಅಲ್ಲದೆ ನಾಯಿ ಮಾತ್ರವಲ್ಲ ಮನುಷ್ಯನ ಮೇಲೂ ಇದೀಗ ಚಿರತೆಯ ಕೆಂಗಣ್ಣು ಬೀರಿರುವುದರಿಂದ ಜನರು ಭೀತರಾಗಿದ್ದಾರೆ.

ಇತ್ತೀಚೆಗೆ ಸುಬ್ರಹ್ಮಣ್ಯ ಸಮೀಪದ ಕೈಕಂಬ ಎಂಬಲ್ಲಿ ಚಿರತೆಯೊಂದು ಪತ್ತೆಯಾಗಿತ್ತು. ನಾಯಿಯನ್ನು ಓಡಿಸಿಕೊಂಡು ಬಂದಿದ್ದ ಚಿರತೆ ಶೌಚಾಲಯದಲ್ಲಿ ಲಾಕ್‌ ಆಗಿತ್ತು. ನಂತರ ಅರಣ್ಯ ಇಲಾಖೆ ಹಿಡಿಯಲು ಪ್ರಯತ್ನಿಸುತ್ತಿದ್ದ ವೇಳೆ ಚಿರತೆ ಸ್ಥಳದಿಂದ ಎಸ್ಕೇಪ್‌ ಆಗಿತ್ತು. ಪರಾರಿಯಾದ ಚಿರತೆ ಇದಾಗಿರಬಹುದೇ ಎಂಬ ಅನುಮಾನ ಇದೀಗ ಮೂಡಿದೆ.