DAKSHINA KANNADA
ಕಡಬದ: ಟಿಪ್ಪರ್ ಹಾಗೂ ಸ್ಕೂಟಿ ಮಧ್ಯೆ ಅಪಘಾತ, ತಾಯಿ-ಮಗ ಪಾರು

ಕಡಬ, ಆಗಸ್ಟ್ 26: ಮರಳು ಸಾಗಿಸುವ ಟಿಪ್ಪರ್ ಹಾಗೂ ಸ್ಕೂಟಿ ನಡುವೆ ಅಪಘಾತ ಸಂಭವಿಸಿ ತಾಯಿ ಮತ್ತು ಮಗ ಅದೃಷ್ಟವಶಾತ್ ಪಾರಾದ ಘಟನೆ ನೆಲ್ಯಾಡಿಯ ಗೋಳಿತೊಟ್ಟು ಗ್ರಾಮದ ನೂಜೋಲು ಎಂಬಲ್ಲಿ ನಡೆದಿದೆ.
ನಿನ್ನೆ ಮಧ್ಯಾಹ್ನ ಉಪ್ಪಿನಂಗಡಿ ಕಡೆಯಿಂದ ನೂಜೋಲು ನಿವಾಸಿ ಕುಶಾಲಪ್ಪ ಹಾಗೂ ಅವರ ತಾಯಿ ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಅತಿವೇಗದಲ್ಲಿ ಬಂದ ಮರಳು ಸಾಗಿಸುವ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಟಿಪ್ಪರ್ ನ ಅಡಿಗೆ ಬಿದ್ದಿದ್ದ ಮಹಿಳೆಯನ್ನು ಎರಡು ಕ್ರೈನ್ ಗಳ ಸಹಾಯದಿಂದ ಟಿಪ್ಪರನ್ನು ಮೇಲೆತ್ತಿ ಮಹಿಳೆಯನ್ನು ಹೊರತೆಗೆಯಲಾಯಿತು ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಹಾಗೂ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿದ್ದರು. ಘಟನೆಯಲ್ಲಿ ತಾಯಿ-ಮಗ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.