Connect with us

    KARNATAKA

    ನೈರುತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ ಕೆ.ಎಸ್. ಜೈನ್ ಅಧಿಕಾರ  ಸ್ವೀಕಾರ..!

    ಹುಬ್ಬಳ್ಳಿ : ನೈರುತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ ಕೆ.ಎಸ್. ಜೈನ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಕೆ.ಎಸ್. ಜೈನ್ ಅವರು ರೂರ್ಕಿ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು 1987 ರಲ್ಲಿ ಪಡೆದಿದ್ದಾರೆ.

     

    ಇಂಡಿಯನ್ ರೈಲ್ವೆ ಸರ್ವಿಸ್ ಆಫ್ ಮೆಕ್ಯಾನಿಕಲ್ ಎಂಜಿನಿಯರಿಂಗ್ (IRSME) 1988 ರ ಬ್ಯಾಚ್ ನ ಅಧಿಕಾರ ಆಗಿ ರೈಲ್ವೆಯಲ್ಲಿ ಸೇರಿದರು. ಜನವರಿ 9, 1991 ರಂದು ಕೆ.ಎಸ್.ಜೈನ್ ಅವರು ಉತ್ತರ ರೈಲ್ವೆಯಲ್ಲಿ ಸಹಾಯಕ ವಿಭಾಗೀಯ ಮೆಕ್ಯಾನಿಕಲ್ ಎಂಜಿನಿಯರ್ / ಸಿ & ಡಬ್ಲ್ಯೂ / ಫಿರೋಜ್ಪುರದಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು, ಉತ್ತರ ರೈಲ್ವೆ, DMW, NER, RDSO, & ICF ದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪರಿಣತಿಯನ್ನು ಪ್ರದರ್ಶಿಸಿಸಿ, ಮೆಕ್ಯಾನಿಕಲ್ ವಿಭಾಗಕ್ಕೆ ಗಮನಾರ್ಹ ಸೇವೆಯನ್ನು ಸಲ್ಲಿಸಿದ್ದಾರೆ.

    ತಿರುವನಂತಪುರಂ ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮತ್ತು ಅಲಿಪುರದ್ವಾರ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ದಕ್ಷಿಣ ಮಧ್ಯ ರೈಲ್ವೆಯಲ್ಲಿ CWE ಆಗಿ ಸೇರಿದಾಗ ಅವರ ಸಮರ್ಪಣೆ ಮತ್ತು ವಿಶಿಷ್ಟ ವಿಧಾನವು ಸ್ಪಷ್ಟವಾಯಿತು, ನಂತರ ಜೂನ್ 1, 2023 ರಿಂದ PCME ಆಗಿ ನೇಮಕಗೊಂಡರು.

    ಅವರ ಸುದೀರ್ಘ ಅಧಿಕಾರಾವಧಿಯಲ್ಲಿ, ಅವರು ಭಾರತ ಮತ್ತು ವಿದೇಶಗಳಲ್ಲಿ ಹಲವಾರು ತರಬೇತಿಗಳಿಗೆ ಹಾಜರಾಗಿದ್ದಾರೆ. 2005 ರಲ್ಲಿ ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ನಲ್ಲಿ LHB ತರಬೇತಿ, ಚೀನಾದಲ್ಲಿ ಎರಡು ಸಲ RDSO ತಪಾಸಣೆ ತರಬೇತಿ, ಸಿಂಗಾಪುರ ಮತ್ತು ಮಲೇಷ್ಯಾದಲ್ಲಿMDP ತರಬೇತಿ ಮತ್ತು ಇಟಲಿಯ ಮಿಲನ್ನಲ್ಲಿ DRM ತರಬೇತಿ ಪಡೆದಿದ್ದಾರೆ.

    ನೈರುತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮುನ್ನ,  ಕೆ.ಎಸ್.ಜೈನ್ ಅವರು ದಕ್ಷಿಣ ಮಧ್ಯ ರೈಲ್ವೆಯಲ್ಲಿ ಪ್ರಧಾನ ಮುಖ್ಯ ಮೆಕ್ಯಾನಿಕಲ್ ಎಂಜಿನಿಯರ್ ಸ್ಥಾನವನ್ನು ಹೊಂದಿದ್ದರು. ಅವರ ವೃತ್ತಿಜೀವನದುದ್ದಕ್ಕೂ ನಿರಂತರವಾಗಿ ಅನನ್ಯ ಸೇವೆಯನ್ನು ಸಲ್ಲಿಸಿದ್ದಾರೆ.

    “ಶ್ರೀ ಕೆ.ಎಸ್. ಜೈನ್ ಅವರ ಹೊಸ ವೃತ್ತಿಜೀವನಕ್ಕಾಗಿ ನಾವು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ, ನೈರುತ್ಯ ರೈಲ್ವೆಯ ಬೆಳವಣಿಗೆ ಮತ್ತು ದಕ್ಷತೆಗೆ ಅವರ ನಿರಂತರ ಕೊಡುಗೆಗಳನ್ನು ನೋಡಲಿದ್ದೇವೆ” ಎಂದು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಹೇಳಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *