Connect with us

    LATEST NEWS

    ಅಝೀಝಿಯಾದಲ್ಲಿ ಮುಸ್ಲಿಂ ವೆಲ್ಫೇರ್ ಎಸೋಸಿಯೇಶನ್ ವತಿಯಿಂದ ರಶೀದ್ ವಿಟ್ಲರಿಗೆ ಸನ್ಮಾನ

    ಮಂಗಳೂರು : ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ಎಸೋಸಿಯೇಶನ್ ದೋಹಾ ಕತಾರ್ ವತಿಯಿಂದ ಮಂಗಳೂರಿನ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕರೂ, ಬಂಟ್ವಾಳ ಜಮೀಯ್ಯತುಲ್ ಫಲಾಹ್ ನ ಅಧ್ಯಕ್ಷರಾಗಿರುವ ರಶೀದ್ ವಿಟ್ಲ ಅವರನ್ನು ಅನಿವಾಸಿ ಉದ್ಯಮಿ ಅಬ್ದುಲ್ಲ ಮೋನು ಅವರ ಕತಾರ್ ನ ಅಝೀಝಿಯಾ ನಿವಾಸದಲ್ಲಿ ಸೋಮವಾರ ಸನ್ಮಾನಿಸಲಾಯಿತು.

    1992 ರಲ್ಲಿ ಕತಾರ್ ನಲ್ಲಿ ಪ್ರಾರಂಭಿಸಲಾದ ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ಎಸೋಸಿಯೇಶನ್ ನಲ್ಲಿ 280 ಸದಸ್ಯರಿದ್ದು, ಕಳೆದ 32 ವರ್ಷಗಳಿಂದ ತಾಯ್ನಾಡಿನಲ್ಲಿ ವಿದ್ಯಾಭ್ಯಾಸ, ಆರೋಗ್ಯ, ಅಶಕ್ತರ ಮದುವೆ ಕಾರ್ಯಗಳಿಗೆ ಸಹಕಾರ ನೀಡುತ್ತಾ ದುಡಿಯುತ್ತಿದೆ. ಮುಂದಿನ ದಿನಗಳಲ್ಲಿ ಈ ಸಂಘಟನೆಯ ಅಧೀನದಲ್ಲಿ ಕತಾರ್ ನಲ್ಲಿರುವ ಕರಾವಳಿಯ ಬ್ಯಾರಿ ಸಮುದಾಯದ ಕುಟುಂಬಿಕರನ್ನು ಸೇರಿಸಿ ಬ್ಯಾರಿ ಕಲ್ಚರಲ್ ಅಸೋಸಿಯೇಶನ್ ಸ್ಥಾಪನೆಯ ಉದ್ದೇಶವಿದೆ. ಮಂಗಳೂರಿನ ಬಿಸಿಸಿಐ ಕೂಡಾ ಇದರೊಂದಿಗೆ ರಚಿಸಲಾಗುವುದು. ಆ ಮೂಲಕ ದೋಹಾ ಕತಾರಲ್ಲಿರುವ ಸಹಸ್ರಾರು ಬ್ಯಾರಿ ಸಮುದಾಯದ ಒಗ್ಗೂಡುವಿಕೆಗೆ ಶ್ರಮಿಸುವ ಇರಾದೆ ಇದೆ. ಕತಾರ್ ನಂತಹ ವಿದೇಶದಲ್ಲಿ ಕೂಡಾ ಬ್ಯಾರಿ ಭಾಷೆ, ಸಂಸ್ಕೃತಿ, ಸಾಹಿತ್ಯ, ಇತಿಹಾಸವನ್ನು ಉಳಿಸಿ ಬೆಳೆಸುವುದು ಇದರ ಉದ್ದೇಶ ಎಂದು ಅನಿವಾಸಿ ಉದ್ಯಮಿ ಮತ್ತು ಸಂಘಟಕರಾದ ಅಬ್ದುಲ್ಲ ಮೋನು ತಿಳಿಸಿದರು.

    ಎಂ.ಫ್ರೆಂಡ್ಸ್ ಟ್ರಸ್ಟಿ ಹಾರಿಸ್ ಎಂ.ಕೆ., ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ಎಸೋಸಿಯೇಶನ್ ನ ಅಧ್ಯಕ್ಷ ಸುಹೈಬ್ ಅಹ್ಮದ್, ಕಾರ್ಯದರ್ಶಿ ರಶೀದ್ ಕಕ್ಕಿಂಜೆ, ಉಪಾಧ್ಯಕ್ಷರಾದ ಇಮ್ರಾನ್ ಭಾವ ಹಾಗೂ ರಿಝ್ವಾನ್ ಅಹ್ಮದ್, ಇಲ್ಯಾಸ್ ಬ್ಯಾರಿ, ಕಾಸಿಂ ಉಡುಪಿ, ಶರೀಫ್ ಕರಾಯ, ಶಮೀರ್ ಮಾಹಿನ್, ಎಂ.ಕೆ. ಸುಹೈಬ್, ನಿಝಾನ್ ಅಬ್ದುಲ್ಲ ಉಪಸ್ಥಿತರಿದ್ದರು. ಅಬ್ದುಲ್ಲ ಮೋನು ಕತಾರ್ ಸ್ವಾಗತಿಸಿದರು. ರಶೀದ್ ಕಕ್ಕಿಂಜೆ ಅಭಿನಂದನಾ ಮಾತುಗಳನ್ನಾಡಿ ವಂದಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply