LATEST NEWS
ಗೋವಿನ ಮೇವಿಗಾಗಿ ಗದ್ದೆಗಿಳಿದ ಪೇಜಾವರ ಕಿರಿಯ ಶ್ರೀಗಳು
ಗೋವಿನ ಮೇವಿಗಾಗಿ ಗದ್ದೆಗಿಳಿದ ಪೇಜಾವರ ಕಿರಿಯ ಶ್ರೀಗಳು
ಉಡುಪಿ ಎಪ್ರಿಲ್ 12: ಗೋ ಪಾಲನೆ ಮತ್ತು ಪೋಷಣೆ ಬಗ್ಗೆ ನಿತ್ಯ ಹೋರಾಟ ನಡೆಸುವ ಪೇಜಾವರ ಕಿರಿಯ ಶ್ರೀಗಳಾದ ವಿಶ್ವ ಪ್ರಸನ್ನ ತೀರ್ಥರು ಸ್ವತಃ ಗೋವಿನ ಮೇವಿಗಾಗಿ ಗದ್ದೆಗಿಳಿದು ಸ್ವತಃ ಕಟಾವು ಮಾಡಿದರು.
ಕುಂಜಾರುಗಿರಿಯ ಸುದರ್ಶನ್ ರಾವ್ ಎಂಬುವರು ಕಳೆದ ಹಲವು ವರ್ಷಗಳಿಂದ ತಮ್ಮ ಗದ್ದೆಯಲ್ಲಿ ಜೋಳ ಬೆಳೆದು ಅದನ್ನು ಉಚಿತವಾಗಿ ನೀಲಾವರ ಗೋಶಾಲೆಗೆ ನೀಡುತ್ತಿದ್ದರು. ಪ್ರತಿಬಾರಿ ಕಟಾವಿನ ಸಂದರ್ಭದಲ್ಲಿ ನೆರೆಯ ಶಾಲೆಯ ವಿದ್ಯಾರ್ಥಿಗಳು ಊರವರು ಜೋಳವನ್ನು ಕಚಾವು ಮಾಡಲು ಸಹಕರಿಸುತ್ತಿದ್ದರು.
ಈ ಬಾರಿ ತಮ್ಮ ಗೋಶಾಲೆಗೆ ಉಚಿತವಾಗಿ ಮೇವು ನೀಡುತ್ತರುವ ಸುದರ್ಶನ್ ಅವರ ಗದ್ದೆಗೆ ಪೇಜಾವರ ಕಿರಿಯ ಸ್ವಾಮಿಜಿಗಳು ತಾವಾಗಿಯೇ ಬಂದು ಸ್ವತ ತಾವೇ ಗದ್ದೆಗಿಳಿದು ಬೆಳೆದು ಜೋಳವನ್ನು ಕಟಾವು ಮಾಡಿದರು. ಈ ಸಂದರ್ಭದಲ್ಲಿ ಸ್ವಾಮಿಜಿಯವರಿಗೆ ನೆರೆಯ ಶಾಲೆಯ ವಿಧ್ಯಾರ್ಥಿಗಳು ಹಾಗೂ ಊರವರು ಹಾಗೂ ಕಾಪು ಮಾಜಿ ಶಾಸಕ ಲಾಲಾಜಿ ಮೆಂಡನ್ ಅವರು ಸಹಕಾರ ನೀಡಿದರು.