LATEST NEWS
ದುಷ್ಕರ್ಮಿಗಳಿಂದ ತಲಪಾಡಿಯಲ್ಲಿ ಬಾರ್ ಗೆ ನುಗ್ಗಿ ದಾಂಧಲೆ
ದುಷ್ಕರ್ಮಿಗಳಿಂದ ತಲಪಾಡಿಯಲ್ಲಿ ಬಾರ್ ಗೆ ನುಗ್ಗಿ ದಾಂಧಲೆ
ಮಂಗಳೂರು ಎಪ್ರಿಲ್ 12: ಕಿಡಿಗೇಡಿಗಳ ತಂಡವೊಂದು ಬಾರ್ ನೊಳಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ಮಂಗಳೂರು ಹೊರವಲಯದ ತಲಪಾಡಿ ಎಂಬಲ್ಲಿ ನಡೆದಿದೆ.
ಈ ಘಟನೆ ಅಲ್ಲಿ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು ಇಲ್ಲಿಯ ಅತಿಥಿ ಬಾರ್ ಗೆ ನುಗ್ಗಿದ ಸುಮಾರು ಹತ್ತು ಮಂದಿಯಿದ್ದ ದುಷ್ಕರ್ಮಿಗಳ ತಂಡ ಬಾರ್ ನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದೆ.
ಸ್ಥಳೀಯ ಯುವಕರ ತಂಡವೇ ಈ ದಾಂಧಲೆ ನಡೆಸಿದೆ ಎನ್ನಲಾಗಿದ್ದು, ಈ ಹಿಂದೆಯೂ ಈ ಯುವಕರ ತಂಡ ಸಣ್ಣಪುಟ್ಟ ಕಾರಣಕ್ಕೆ ಬಾರ್ ನಲ್ಲಿ ಬಂದು ಗಲಾಟೆ ನಡೆಸಿದ್ದರು ಎಂದು ದೂರಲಾಗಿದೆ.
ಈ ಯುವಕರ ತಂಡದಲ್ಲಿ ಕೆಲವರು ಹೆಲ್ಮೆಟ್ ಮತ್ತು ಮುಖಕ್ಕೆ ಬಟ್ಟೆ ಧರಿಸಿ ಬಾರ್ ಗೆ ನುಗ್ಗಿದ್ದು, ಕ್ಯಾಶ್ ಕೌಂಟರ್ ಸಿಬ್ಬಂದಿಗೆ ಯದ್ವಾತದ್ವ ಹಲ್ಲೆ ನಡೆಸಿದ್ದಾರೆ.
ಅಲ್ಲದೇ ಬಾರ್ ಕೌಂಟರ್ ನ ಮದ್ಯದ ಬಾಟಲಿಗಳಿಂದಲೂ ಸಿಬ್ಬಂದಿ ತಲೆಗೆ ಹೊಡೆದು ಹಲ್ಲೆ ಮಾಡಿದ್ದಾರೆ.
ಬಳಿಕ ಇಡೀ ಬಾರ್ ನ ಗಾಜು ಪುಡಿಗೈದು, ವಸ್ತುಗಳನ್ನು ಎತ್ತಿಹಾಕಿ ದಾಂಧಲೆ ನಡೆಸಿದ್ದಾರೆ.
ಅಲ್ಲದೇ ಒಂದು ಲಕ್ಷ ನಗದು ಮತ್ತು ಮದ್ಯದ ಬಾಟಲಿಗಳನ್ನ ಕಳವುಗೈದಿದ್ದಾರೆ ಎಂದು ಹೇಳಲಾಗಿದ್ದು ಈ ಕುರಿತಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login