LATEST NEWS
ಶಾಲಾ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪತ್ರಕರ್ತನ ಬಂಧನ

ಶಾಲಾ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪತ್ರಕರ್ತನ ಬಂಧನ
ಉಡುಪಿ ನವೆಂಬರ್ 29: ಶಾಲಾ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪರ್ತಕರ್ತ ನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಚಂದ್ರ ಕೆ. ಹೆಮ್ಮಾಡಿ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಕುಂದಾಪುರ ತಾಲೂಕು ಹೆಮ್ಮಾಡಿ ವ್ಯಾಪ್ತಿಯ ದಿನಪತ್ರಿಕೆಯೊಂದರ ಬಿಡಿ ಸುದ್ದಿಗಾರನಾಗಿದ್ದಾನೆ.
ಆರೋಪಿ ಬೈಂದೂರು ಸಮೀಪದ ಕಾಡಿನಲ್ಲಿ ಪೋಟೊ ತೆಗೆದು ಸುದ್ದಿ ಮಾಡಲು ಸ್ಥಳೀಯರಲ್ಲಿ ನೆರವು ಕೇಳಿ, ದಾರಿಗಾಗಿ ಬಾಲಕನನ್ನು ಕರೆದೊಯ್ದು ಬಳಿಕ ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂದು ಆರೋಪಿಸಲಾಗಿದೆ.

ಈ ಘಟನೆಯ ಸಂತ್ರಸ್ಥ ಬಾಲಕ ಕೆಲ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದ, ಅಲ್ಲದೆ ಮನೆಯಲ್ಲಿ ಈ ಘಟನೆಯ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಆದರೆ ಘಟನೆಯ ಬಳಿಕ ಬಾಲಕನಿಗೆ ನಡೆದಾಡಲೂ ಸಹ ಕಷ್ಟವಾಗುತ್ತಿದ್ದು, ಖಿನ್ನತೆಗೆ ಒಳಗಾಗಿದ್ದ ಮಗನನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ದ ಬಳಿಕ ಅಲ್ಲಿ ವೈದ್ಯರು ಬಾಲಕನ ಆರೋಗ್ಯ ತಪಾಸಣೆ ಮಾಡಿದ್ದು ಈ ವೇಳೆ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿದೆ.
ಬಾಲಕನ ಜೊತೆ ಆಪ್ತ ಸಮಾಲೋಚನೆ ನಡೆಸಿದ ಬಳಿಕ ಚಂದ್ರ ಕೆ ಹೆಮ್ಮಾಡಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿ ಎಂದು ಬಹಿರಂಗಗೊಂಡಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ರಾತ್ರೋರಾತ್ರಿ ಚಂದ್ರ ಕೆ. ಹೆಮ್ಮಾಡಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕನ ತಂದೆಯು ನೀಡಿದ ದೂರಿನ ಮೇರೆಗೆ ಬೈಂದೂರು ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿ ಆರೋಪಿ ಚಂದ್ರ ಕೆ ಹೆಮ್ಮಾಡಿಯನ್ನು ಬಂಧಿಸಿದ್ದಾರೆ.