LATEST NEWS
ದತ್ತಪೀಠಕ್ಕೆ ರಾಹುಲ್ ಗಾಂಧಿಯನ್ನು ಆಹ್ವಾನಿಸಿದ ಕಾರ್ಕಳ ಶಾಸಕ ಸುನಿಲ್ ಕುಮಾರ್
ದತ್ತಪೀಠಕ್ಕೆ ರಾಹುಲ್ ಗಾಂಧಿಯನ್ನು ಆಹ್ವಾನಿಸಿದ ಕಾರ್ಕಳ ಶಾಸಕ ಸುನಿಲ್ ಕುಮಾರ್
ಕಾರ್ಕಳ ನವೆಂಬರ್ 29: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮದು ದತ್ತಾತ್ರೇಯ ಗೋತ್ರ ಎಂದು ಘೋಷಿಸಿದ ಹಿನ್ನಲೆಯಲ್ಲಿ ಕಾರ್ಕಳ ಬಿಜೆಪಿ ಶಾಸಕ ಸುನಿಲ್ ಕುಮಾರ್ ರಾಹುಲ್ ಗಾಂಧಿಗೆ ಸವಾಲು ಹಾಕಿದ್ದಾರೆ.
ಡಿಸೆಂಬರ್ 22 ರಂದು ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿ ಉತ್ಸವ ನಡೆಯಲಿದ್ದು, ಚಿಕ್ಕಮಗಳೂರಿನ ದತ್ತಪೀಠಕ್ಕೆ ನೀವು ಬನ್ನಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಬಿಜೆಪಿ ಶಾಸಕ ಹಾಗೂ ಮುಖ್ಯ ಸಚೇತಕ ಸುನಿಲ್ ಕುಮಾರ್ ಆಹ್ವಾನ ನೀಡಿದ್ದಾರೆ.
ವಿಧಾನಸಭಾ ವಿಪಕ್ಷ ಮುಖ್ಯ ಸಚೇತರ ಸುನೀಲ್ ಕುಮಾರ್ ತಮ್ಮ ಟ್ವೀಟ್ ನಲ್ಲಿ ಮಾತನಾಡಿ, ಡಿಸೆಂಬರ್ 22 ಚಿಕ್ಕಮಗಳೂರು ದತ್ತಪೀಠದಲ್ಲಿ ದತ್ತ ಜಯಂತಿ ಉತ್ಸವ ನಡೆಯಲಿದೆ. ಚಿಕ್ಕಮಗಳೂರಿನ ದತ್ತಪೀಠಕ್ಕೆ ನೀವು ಬನ್ನಿ.
ನಲ್ವತ್ತು ವರ್ಷಗಳ ಬಳಿಕ ನಿಮ್ಮ ಗೋತ್ರದ ಬಗ್ಗೆ ಘೋಷಣೆಯಾಗಿದೆ. ನಿಮ್ಮದು ದತ್ತಾತ್ರೇಯ ಗೋತ್ರವಾಗಿರುವುದರಿಂದ ನೀವು ದತ್ತಪೀಠಕ್ಕೆ ಬರಲೇಬೇಕೆಂದು ವಿಡಿಯೋ ಮಾಡಿ ಕಾಲೆಳೆದಿದ್ದಾರೆ.
I cordially invite Sri Rahul Gandhi, Dattatreya Gotra, to attend the Datta Jayanthi Celebrations on 22nd December 2018 in Chickmagalur.@RahulGandhi @BJP4Karnataka #dattajayanthi
— Sunil Kumar Karkala (@karkalasunil) November 29, 2018
ದತ್ತಾತ್ರೇಯ ಗೋತ್ರದ ನೀವು ದತ್ತಪೀಠಕ್ಕೆ ಬರಬೇಕು. ದತ್ತ ಜಯಂತಿಯಲ್ಲಿ ನೀವು ನಮ್ಮ ಜೊತೆ ಪಾಲ್ಗೊಳ್ಳಬೇಕು. ಈ ಮೂಲಕ ದಶಕದಿಂದ ಇರುವ ದತ್ತಪೀಠದ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನ ಮಾಡಿ ಎಂದು ಹೇಳಿದ್ದಾರೆ.
VIDEO
Facebook Comments
You may like
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಬಾಂಬ್ ಸ್ಫೋಟ
ಮಂಗಳೂರು ಮೇಯರ್ ಆಗಿ ಪ್ರೇಮಾನಂದ ಶೆಟ್ಟಿ.. ಸುಮಂಗಲಾ ರಾವ್ ಉಪ ಮೇಯರ್
ಯಾರಿಗೂ ವಂಚನೆ ಮಾಡಿಲ್ಲ – ಐ ವಿಲ್ ಕಮ್ ಬ್ಯಾಕ್ ಅಗೈನ್ – ಬಿ.ಆರ್ ಶೆಟ್ಟಿ
ಕೋಟ – ಬೈಕ್ ಗೆ ಕಾರು ಡಿಕ್ಕಿ ಸವಾರ ಸ್ಥಳದಲ್ಲೇ ಸಾವು
ತೈಲ ದರ ಹೆಚ್ಚಾದರೂ ಚಿಂತೆಯಿಲ್ಲ ಎನ್ನುವವರಿಗೆ ಲೀಟರಿಗೆ 1 ಸಾವಿರ ದರ ವಿಧಿಸಿ : ಯು.ಟಿ. ಖಾದರ್
ಬಿಜೆಪಿ ರಾಜ್ಯಾಧ್ಯಕ್ಷರ ತವರಲ್ಲೇ ಭಿನ್ನಮತ ಸ್ಪೋಟ..ಜಿಲ್ಲಾ ಪಂಚಾಯತ್ ಸದಸ್ಯ ಸೇರಿ ನಾಲ್ವರು ಉಚ್ಚಾಟನೆ
You must be logged in to post a comment Login