ಜೋಡುಪಾಳದ ಆಪತ್ಬಾಂಧವರು ಈಗ ಆಸ್ಪತ್ರೆಯಲ್ಲಿ

ಸುಳ್ಯ ಅಗಸ್ಟ್ 28: ಕೊಡಗು ಜಿಲ್ಲೆಯ ಜೋಡುಪಾಳದಲ್ಲಿ ನಡೆದ ಭೂಕುಸಿತಕ್ಕೆ ಸಿಲುಕಿ ಸಾವು ಬದುಕಿನ ನಡುವೆ ನರಳುತ್ತಿದ್ದ ತಾಯಿ‌ ಹಾಗೂ ಮಗುವನ್ನು ತನ್ನ ಜೀವವನ್ನೂ ಲೆಕ್ಕಿಸದೆ ರಕ್ಷಿಸಿದ ಯುವಕ ಇದೀಗ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಕಾಲು ಮುರಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ರಕ್ಷಣೆಯ ವೇಳೆ ಕಾಲು‌ ಮಣ್ಣಿನೊಳಗೆ ಸಿಲುಕಿ ಹಾಕಿಕೊಂಡ ಪರಿಣಾಮ ಬಿಪಿನ್ ಎನ್ನುವ ಯುವಕ ಕಳೆದ ಹಲವು ದಿನಗಳಿಂದ ಆಸ್ಪತ್ರೆಯಲ್ಲಿದ್ದರೂ ಸರಕಾರದ ಯಾವೊಬ್ಬ ಪ್ರತಿನಿಧಿಯೂ ಆತನ ಆರೋಗ್ಯ ವಿಚಾರಿಸಲು ಹೋಗಿಲ್ಲ.

ಜೋಡುಪಾಳಕ್ಕೆ ಆಗಮಿಸಿದ್ದ ಸಚಿವ ಜಮೀರ್ ಅಹಮ್ಮದ್ ಕೇವಲ ಒಂದು ಸಮುದಾಯದ ಸಂಘಟನೆಗೆ ಉಡುಗೊರೆ ನೀಡುವ ಮೂಲಕ ತಾರತಮ್ಯ ಎಸಗಿದ್ದಾರೆ ಎನ್ನುವ ಆರೋಪ ಇದೀಗ ಕೇಳಿ ಬರುತ್ತಿದೆ.

VIDEO

4 Shares

Facebook Comments

comments