LATEST NEWS
ವಿಶ್ವಕ್ಕೆ ತನ್ನ ಕಂಪು ಪಸರಿಸಿದ ಮಲ್ಲಿಗೆ ಬೆಳೆಗಾರರು ಸಂಕಷ್ಟದಲ್ಲಿ
ಉಡುಪಿ, ಎಪ್ರಿಲ್ 28: ವಿಶ್ವಕ್ಕೆ ತನ್ನ ಕಂಪು ಪಸರಿಸಿದ ಮಲ್ಲಿಗೆಯ ಬೆಳೆಗಾರರು ಎರಡನೇ ವರ್ಷವೂ ತಮ್ಮ ಸಂಪೂರ್ಣ ವ್ಯಾಪಾರ ಕಳೆದುಕೊಳ್ಳುತ್ತಿದ್ದಾರೆ. ಎಪ್ರಿಲ್ ಮೇ ತಿಂಗಳಲ್ಲಿ ಸಾವಿರ ದಾಟುವ ಮಲ್ಲಿಗೆ ಸದ್ಯ ಉಡುಪಿ ಜಿಲ್ಲೆಯ ಶಂಕರಪುರ ಮಲ್ಲಿಗೆ ೧೫೦ ದಾಟುತ್ತಿಲ್ಲ.
ಉಡುಪಿ ಮಲ್ಲಿಗೆ ಅಂದ್ರೆ ಎಲ್ಲೆಲ್ಲೂ ಫೇಮಸ್ ಅದಕ್ಕೆ ಬೇಡಿಕೆ ಇರೋದೆ ಮದುವೆ ಸೀಸನ್ ಅಂದ್ರೆ ಜನವರಿಯಿಂದ ಮೇ ವರೆಗೆ, ಆದ್ರೆ ಕಳೆದ ಬಾರಿ ಲಾಕ್ ಡೌನ್ ನಿಂದ ವರ್ಷದ ವ್ಯಾಪಾರ ಹಾಳಾಯ್ತು ಈ ಬಾರಿ ಮತ್ತೆ ಲಾಕ್ ಡೌನ್ ಆಗಿದೆ. ಹೂವಿನ ದರ ಭಾರಿ ಕುಸಿತ ಕಂಡಿದೆ, ಕೃಷಿಕರಲ್ಲಿ ಆತಂಕ ಹೆಚ್ಚಿದೆ.
ನಿನ್ನೆಯ ದರ 340/- ಇಂದಿನ ದರ 150/- ಮುಂಬೈ ಮತ್ತು ಇತರ ಜಿಲ್ಲೆಗಳಿಗೆ ಮಲ್ಲಿಗೆ ಹೂವು ಹೋಗುತ್ತಿಲ್ಲ ಮದುವೆ ಮತ್ತು ಇನ್ನಿತರ ಶುಭ ಸಮಾರಂಭಗಳು ರದ್ದಾದ ಕಾರಣ ಮಲ್ಲಿಗೆ ದರದಲ್ಲಿ ಕುಸಿತವಾಗಿದ್ದು ಕೃಷಿಕರಲ್ಲಿ ಆತಂಕ ಮೂಡಿದೆ. 14 ದಿನ ಕರ್ಫ್ಯೂ ಹಿನ್ನಲೆಯಿಂದ 10 ಗಂಟೆ ಒಳಗೆ ಎಲ್ಲಾ ಚಟುವಟಿಕೆ ಮುಗಿಯ ಬೇಕಾಗಿದೆ, ಆದ್ದರಿಂದ ಹೂವಿನ ವ್ಯಾಪಾರಿಗಳು ಕಷ್ಟಪಡುವಂತಾಗಿದೆ. ಕೋವಿಡ್ ನಿಂದ ಸಾಕಷ್ಟು ಮಲ್ಲಿಗೆ ಕೃಷಿಕರು ನಷ್ಟ ಅನುಭವಿಸಿರುವುದಂತು ಸತ್ಯ.