ಕ್ರೋಧಿನಾಮ ಸಂವತ್ಸರದಲ್ಲಿ ಜಲ ಕಂಟಕ, ನಿಜವಾಯ್ತು ಕೋಡಿಮಠ ಶ್ರೀಗಳ ಭಯಾನಕ ಭವಿಷ್ಯ..!
ಕಾರವಾರ : ನಾಡಿಗೆ ಆಪತ್ತು ತಂದ ಜಲ ಕಂಟಕದ ಬಗ್ಗೆ ಕೋಡಿಮಠ ಶ್ರೀಗಳು ನುಡಿದಿದ್ದ ಭವಿಷ್ಯ ನಿಜವಾಗಿದೆ. ಕೋಡಿ ಮಠದ ಡಾ. ಶ್ರೀ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಅವರು ನಾಡಿಗೆ ಕಾಡಲಿರುವ ಜಲಕಂಟಕದ ಬಗ್ಗೆ ಈ ವರ್ಷದ ಆರಂಭದಲ್ಲೆ ಭವಿಷ್ಯ ನುಡಿದಿದ್ದರು.
ಶ್ರೀಗಳು ನಾಡಿನಾದ್ಯಂತ ಮಳೆಯಾಗುತ್ತೆ, ಭೂಮಿ ಕಂಪಿಸುತ್ತೆ, ಗುಡ್ಡ ಕುಸಿಯುತ್ತವೆ. ರೋಗಗಳು ಹೆಚ್ಚಾಗುತ್ತವೆ. ಜಾಗತಿಕ ಮಟ್ಟದಲ್ಲಿ ಕೆಲವು ರಾಜ್ಯಗಳು ಮುಳುಗುತ್ತವೆ ಎಂದು ಭವಿಷ್ಯ ನುಡಿದಿದ್ದರು. ಇದು ಬರುವ ಅಮವಾಸ್ಯೆವರೆಗೂ ಮುಂದುವರೆಯುತ್ತವೆ. ಅಮವಾಸ್ಯೆ ನಂತರ ಬೇರೆ ಭಾಗದಲ್ಲಿ ಸಂಭವಿಸುತ್ತದೆ. ಈ ಕ್ರೋಧಿನಾಮ ಸಂವತ್ಸರದಲ್ಲಿ ಅವಘಡಗಳು ಸಂಭವಿಸಿವೆ. ಕ್ರೋಧ ಅಂದರೆ ಸಿಟ್ಟು. ಈ ಸಮಯದಲ್ಲಿ ಕೆಟ್ಟದ್ದು ಜಾಸ್ತಿ ನಡೆಯುತ್ತದೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದು ಈ ನುಡಿಗಳು ಇದೀಗ ಸತ್ಯವಾಗಿವೆ.
ಕರ್ನಾಟಕದಲ್ಲಿ ನಿರಂತರ ಮಳೆ, ಗಾಳಿ ಮತ್ತು ಉಕ್ಕಿ ಹರಿಯುತ್ತಿರುವ ನದಿಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯಿಂದ ಗುಡ್ಡ ಕುಸಿದು ಸಾಕಷ್ಟು ಹಾನಿಯಾಗಿವೆ. ಕೆಲ ರಸ್ತೆ ಮತ್ತು ರೈಲು ಸಂಪರ್ಕ ಬಂದ್ ಆಗಿವೆ. ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿನ ಸಪ್ತ ನದಿಗಳು ತುಂಬಿ ಹರಿಯುವುತ್ತಿರುವುದರಿಂದ ಕೆಲ ಗ್ರಾಮಗಳಿಗೆ ನೀರು ನುಗ್ಗಿದೆ. ಅತ್ತ ಭಾಗಲಕೋಟೆ ಜಿಲ್ಲೆಯಲ್ಲೂ ಪ್ರವಾಹ ಪರಿಸ್ಥಿತಿ ಉದ್ಭವಿಸಿದ್ದು ಇದರಿಂದ ಜನರು ಹೈರಾಣಾಗಿದ್ದಾರೆ.
ಪಕ್ಕದ ಕೇರಳ ರಾಜ್ಯದ ವಯನಾಡಿನಲ್ಲಿ ಎಂದೆದೂ ಕಾಣದ ಭೀಕರವಾದ ಭೂ ಕುಸಿತ ಉಂಟಾಗಿ ನೂರಾರು ಜನ ಪ್ರಾಣಕಳಕೊಂಡರೆ, ಸಾವಿರಾರು ಜನ ಆಸ್ತಿಪಾಸ್ತಿ ಕಳಕೊಂಡಿದ್ದು ಎಲ್ಲೆಡೆ ಸ್ಮಶಾನ ಮೌನ ಆವರಿಸಿದೆ, ಭೂ ಕುಸಿತದಿಂದ ಐದು ಹಳ್ಳಿಗಳು ಸಂಪೂರ್ಣ ನಾಶವಾಗಿವೆ.