LATEST NEWS
ಒಳ ಉಡುಪು ಧರಿಸದೆ ಮನೆಯಿಂದ ಹೊರ ಹೋದ್ರೆ ಜೈಲು ಶಿಕ್ಷೆ!: ಈ ದೇಶದಲ್ಲಿದೆ ವಿಚಿತ್ರ ಕಾನೂನು

ಜಗತ್ತಿನಲ್ಲಿ ಪ್ರತಿಯೊಂದು ದೇಶವೂ ತನ್ನದೆ ಆದ ನಿಯಮ ಹಾಗೂ ವಿಭಿನ್ನ ಕಾನೂನು ವ್ಯವಸ್ಥೆಯನ್ನು ಹೊಂದಿದೆ. ಭಾರತದ ಪ್ರಕಾರ ಹಲವು ನಗರಗಳಲ್ಲಿ ರಚಿಸಲಾದ ಕಾನೂನುಗಳು ತುಂಬಾ ವಿಚಿತ್ರವಾಗಿವೆ. ಅದೇ ರೀತಿ, ಅನೇಕ ದೇಶಗಳಲ್ಲಿ ಒಳ ಉಡುಪುಗಳನ್ನು ಧರಿಸುವುದು ಮತ್ತು ಒಣಗಿಸುವುದರ ಬಗ್ಗೆ ವಿಚಿತ್ರ ಕಾನೂನುಗಳಿವೆ.
ಇವುಗಳನ್ನು ತಿಳಿದರೆ ನೀವು ಕೂಡ ಆಶ್ಚರ್ಯಚಕಿತರಾಗುವಿರಿ. ಥೈಲ್ಯಾಂಡ್‌ನಲ್ಲೂ ಇದೇ ರೀತಿಯ ಕಾನೂನು ಇದೆ. ಅದನ್ನು ಕೇಳಿದರೆ ನಿಮಗೂ ವಿಚಿತ್ರ ಎನಿಸಬಹುದು. ಥೈಲ್ಯಾಂಡ್‌ನಲ್ಲಿ ಒಳಉಡುಪು ಧರಿಸದೆ ಹೊರಗೆ ಹೊಗುವಂತಿಲ್ಲ ಎಂಬ
ನಿಯಮವಿದೆ. ಈ ದೇಶದಲ್ಲಿ ಮನೆಯ ಹೊರಗೆ ಹಾಗೂ ಒಳಗೆ ಒಳ ಉಡುಪು ಧರಿಸುವಂತೆ ಒತ್ತಾಯಿಸಲಾಗುತ್ತದೆ. ಇಲ್ಲಿ ನೀವು ಮನೆಯ ಹೊರಗೆ ಬಟ್ಟೆಗಳನ್ನು ಧರಿಸಬೇಕು. ಆದ್ದರಿಂದ, ನೀವು ಥೈಲ್ಯಾಂಡ್ ಹೋದಾಗಲೆಲ್ಲಾ ಇದನ್ನು ನೆನಪಿನಲ್ಲಿಡಿ.

ಈ ದೇಶದಲ್ಲಿ ಯಾರದರೂ ಮನೆಯ ಹೊರಗೆ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಒಳ ಉಡುಪು ಧರಿಸಿದೆ ಸಿಕ್ಕಿಬಿದ್ದರೆ ಜೈಲು ಶಿಕ್ಷೆಯಾಗಬಹುದು. ಆದರೆ, ಇಲ್ಲಿ ವಿಚಿತ್ರವೆನೆಂದರೆ ಆದಾಗ್ಯೂ, ಈ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಇಲ್ಲಿಯವರೆಗೆ ಯಾರಿಗೂ ಜೈಲು ಶಿಕ್ಷೆ ವಿಧಿಸಲಾಗಿಲ್ಲ.
ಈ ನಿಯಮ ಜಾರಿಗೆ ತರಲು ಕಾರಣವೇನು..?
ಯಾರಾದರೂ ಹೀಗೆ ಮಾಡುತ್ತಿರುವುದು ಕಂಡುಬಂದರೆ, ಅವರ ಮೇಲೆ ಥಾಯ್ ದಂಡ ಸಂಹಿತೆಯ ಸೆಕ್ಷನ್ 388 ರ ಅಡಿಯಲ್ಲಿ ಆರೋಪ ಹೊರಿಸಲಾಗುತ್ತದ. ಅಂದರೆ ಅಸಭ್ಯ ರೀತಿಯಲ್ಲಿ ತನ್ನನ್ನು ತಾನು ಪ್ರಸ್ತುತಪಡಿಸಿಕೊಳ್ಳುವುದು. ಥಾಯ್ ಜನರು ಹೊರಗೆ ಹೋಗುವಾಗ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡುತ್ತಾರೆ, ಬಹುಶಃ ಈ ಕಾರಣಕ್ಕಾಗಿಯೇ ಈ ನಿಯಮವನ್ನು ಇಲ್ಲಿ ಜಾರಿಗೆ ತರಲಾಗಿದೆ.