Connect with us

FILM

ಜಗ್ಗೇಶ್‌ ಹೆಸರು ಹೇಳಿ ಟ್ವಿಟರ್‌ನಲ್ಲಿ ಮಹಾಮೋಸ!

ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ನಟ ಜಗ್ಗೇಶ್‌ ಹೆಚ್ಚು ಸಕ್ರಿಯರಾಗಿದ್ದಾರೆ. ಆದರೆ ಅವರ ಹೆಸರಿನಲ್ಲಿ ಕೆಲವು ನಕಲಿ ಖಾತೆಗಳು ಹುಟ್ಟಿಕೊಂಡಿವೆ. ಇದು ಜಗ್ಗೇಶ್‌ ಅವರ ಗಮನಕ್ಕೂ ಬಂದಿದ್ದು, ಸೈಬರ್‌ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನರ ದಾರಿ ತಪ್ಪಿಸುತ್ತಿರುವವರಿಗೆ ತಕ್ಕ ಪಾಠ ಕಲಿಸಲು ಜಗ್ಗೇಶ್‌ ಮುಂದಾಗಿದ್ದಾರೆ.

ಅಭಿಮಾನಿಗಳ ಜೊತೆ ಟ್ವಿಟರ್‌ ಮೂಲಕ ಸದಾ ಸಂಪರ್ಕದಲ್ಲಿ ಇರುತ್ತಾರೆ ಜಗ್ಗೇಶ್‌. ಫ್ಯಾನ್ಸ್‌ ಕೇಳುವ ಅನೇಕ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಾರೆ. ಪ್ರಸಕ್ತ ವಿದ್ಯಮಾನಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಈ ನಡುವೆ ‘ನವರಸ ನಾಯಕ ಜಗ್ಗೇಶ್‌’ ಎಂಬ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಖಾತೆ ತೆರೆದಿದ್ದಾರೆ. ಅದರಲ್ಲಿ ಅಸಂಬದ್ಧವಾಗಿ ಪೋಸ್ಟ್‌ ಮಾಡಲಾಗಿದೆ.

ಈ ನಕಲಿ ಟ್ವಿಟರ್‌ ಖಾತೆಯನ್ನೇ ಜಗ್ಗೇಶ್‌ ಅವರ ನಿಜವಾದ ಖಾತೆ ಎಂದುಕೊಂಡು ಕೆಲವರು ಅದಕ್ಕೆ ಪ್ರತಿಕ್ರಿಯಿಸಿದ್ದಾರೆ. ಇದು ಈಗ ಜಗ್ಗೇಶ್ ಗಮನಕ್ಕೆ ಬಂದಿದ್ದು, ಸೈಬರ್‌ ಪೊಲೀಸರಿಗೆ ದೂರು ನೀಡಿದ್ದಾರೆ. ‘Online complaint ಕೊಟ್ಟಿರುವೆ. ಈ ರೀತಿ ಯತ್ನಗಳಿಗೆ ನಾನು ಹೆದರೊಲ್ಲ. ನನ್ನ ಅಭಿಮಾನಿಗಳು ನಂಬೋಲ್ಲ. ನಿಮ್ಮ ಕಾರ್ಯ ನೀವು ಮುಂದುವರಿಸಿ. ನಮ್ಮ ಕಾರ್ಯ ನಾವು ಮಾಡುತ್ತೇವೆ. ಒಟ್ನಲ್ಲಿ ತಂತ್ರಜ್ಞಾನದ ಬಳಕೆ ಮಜವಾಗಿದೆ. best of luck ಭೇಟಿಯಾಗುವ’ ಎಂದು ಜಗ್ಗೇಶ್‌ ಟ್ವೀಟ್‌ ಮಾಡಿದ್ದಾರೆ.

‘ಈ fake ವಿಷಯದ ಹಿಂದೆ ಇರುವವರ ip address ಬಹುತೇಕ ಗೊತ್ತಾಗಿದೆ. ದಯಮಾಡಿ ಅಮಾಯಕರು retweet ಮಾಡಿ ಅನಾವಶ್ಯಕವಾಗಿ cyber ಸಮಸ್ಯೆಗೆ ನೀವು ಸಿಲುಕಬೇಡಿ’ ಎಂದು ಅಭಿಮಾನಿಗಳಿಗೆ ಜಗ್ಗೇಶ್‌ ಕಿವಿಮಾತು ಹೇಳಿದ್ದಾರೆ. ಅಷ್ಟಕ್ಕೂ ಜಗ್ಗೇಶ್‌ ಹೆಸರಿನಲ್ಲಿ ಈ ರೀತಿ ಸೈಬರ್‌ ಕ್ರೈಂ ಮಾಡಿರುವವರು ಯಾರು? ‘ಇದರ ಹಿಂದೆ ಒಬ್ಬ ಡೊಂಗಿ online ಕನ್ನಡ ಓಲಾಟಗಾರನಿದ್ದಾನೆ. Don’t worry ಅವನನ್ನ ನಿಮಗೆ ಮುಂದೆ ಪರಿಚಯ ಮಾಡಿಸುವ’ ಎಂದಿದ್ದಾರೆ ನವರಸ ನಾಯಕ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *