LATEST NEWS
ಅಕ್ರಮ ಹಣ ವರ್ಗಾವಣೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಆರೋಪಿ….!!

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಹಾಗೂ ವಂಚನೆ ಪ್ರಕರಣದಲ್ಲಿ ರಾ ರಾ ರುಕ್ಕಮ್ಮ ಹಾಡಿನ ಖ್ಯಾತಿ ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಆರೋಪಿ ಎಂದು ಇಡಿ ತಿಳಿಸಿದ್ದು, ಬುಧವಾರ ಜಾರಿ ನಿರ್ದೇಶನಾಲಯ ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ಈ ವಂಚನೆ ಪ್ರಕರಣದ ಪ್ರಮುಖ ಆರೋಪಿ. ಈತ ಉದ್ಯಮಿಯೊಬ್ಬರಿಗೆ ಕೋಟಿ ಕೋಟಿ ವಂಚನೆ ಮಾಡಿದ್ದು, ಆತ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಗೆ ಕೋಟಿ ಕೋಟಿ ಬೆಲೆ ಬಾಳುವ ಗಿಪ್ಟ್ ಗಳನ್ನು ನೀಡಿದ್ದಾನೆ. ಇದೀಗ ಆರೋಪಿ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿದ್ದು, ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಕೂಡ ಜೈಲು ಸೇರುವ ಸಾಧ್ಯತೆ ಇದೆ.

ಉದ್ಯಮಿ ಮಾನವೀಂದರ್ ಸಿಂಗ್ ಎಂಬಾತನನ್ನು ಜೈಲಿನಿಂದ ಬಿಡುಗಡೆ ಗೊಳಿಸಲು ಆತನ ಪತ್ನಿಯಿಂದ 200 ಕೋಟಿ ಹಣ ಪಡೆದುಕೊಂಡು ವಂಚನೆ ನಡೆಸಿದ್ದಾನೆ ಎಂದು ಪ್ರಕರಣ ದಾಖಲಾಗಿದ್ದು, ಇದರಲ್ಲಿ ₹ 10 ಕೋಟಿಯನ್ನು ಜಾಕ್ವೆಲಿನ್ ಫರ್ನಾಂಡಿಸ್‌ಗೆ ಉಡುಗೊರೆ ನೀಡಿದ್ದನು. ನಾನು ಗೃಹ ಇಲಾಖೆಯ ಅಧಿಕಾರಿ, ನನಗೆ ರಾಜಕಾರಣಿಗಳು, ಬಾಲಿವುಡ್ ನಟ, ನಟಿಯರ ಜೊತೆ ನಿಕಟ ಸಂಪರ್ಕವಿದೆ ಎಂದು ಹೇಳಿ ಉದ್ಯಮಿ ಮಾನವೀಂದರ್ ಸಿಂಗ್ ಪತ್ನಿಯನ್ನು ನಂಬಿಸಿದ್ದ. ಅವರಿಂದ ₹200 ಕೋಟಿ ಪಡೆದು ವಂಚನೆ ಮಾಡಿದ್ದ. ಈ ಸಂಬಂಧ ಮಾನವೀಂದರ್ ಸಿಂಗ್ ಪತ್ನಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ಇದು ದೊಡ್ಡ ಮೊತ್ತದ ಪ್ರಕರಣವಾಗಿದ್ದರಿಂದ ಪೊಲೀಸರು ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆ ಮಾಡಿದ್ದರು.