ಮಂಗಳೂರು,ಜುಲೈ28:ಕಾಂಗ್ರೇಸ್ ಹಾಗೂ ಸಚಿವ ರಮಾನಾಥ ರೈ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ, ರಾಜ್ಯದ ಜನತೆ ರಾಜ್ಯಕ್ಕೊಂದು ಪ್ರತ್ಯೇಕ ಧ್ವಜ ಬೇಕೆಂದಾಗ ಮುಖ್ಯಮಂತ್ರಿಗಳು ಈ ಬಗ್ಗೆ ಕ್ರಮ ಕೈಗೊಂಡಾಗಲೂ ಈ ಬಿಜೆಪಿಗರಿಗೆ ರಾಜಕೀಯ ವಾಸನೆ ಬಡಿಯುತ್ತಿದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

ಮಂಗಳೂರಿನಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ದಕ್ಷಿಣಕನ್ನಡ ಜಿಲ್ಲೆಯವರಾದ ಹಿರಿಯ ಕಾಂಗ್ರೇಸ್ ನಾಯಕ ರಮಾನಾಥ ರೈಯವರಿಗೆ ರಾಜ್ಯದ ಗೃಹಸಚಿವ ಸ್ಥಾನ ದೊರೆಯುತ್ತದೆ ಎನ್ನುವ ಮಾಹಿತಿ ದೊರೆಯುತ್ತಿದ್ದಂತೆಯೇ ರಮಾನಾಥ ರೈಗಳ ಬಗ್ಗೆ ಕೊಂಕು ಮಾತನಾಡಲು ಬಿಜೆಪಿ ಮುಖಂಡರು ಪ್ರಾರಂಭಿಸಿದ್ದು, ರಮಾನಾಥ ರೈ ಒರ್ವ ಸಮರ್ಥ ನಾಯಕನಾಗಿದ್ದು, ತನಗೆ ನೀಡಿದ ಎಲ್ಲಾ ಜವಾಬ್ದಾರಿಗಳನ್ನೂ ಸಮರ್ಥವಾಗಿ ನಿಭಾಯಿಸುವ ನೈಪುಣ್ಯತೆ ಅವರಲ್ಲಿದೆ ಎಂದರು.

ತಾವೂ ಈ ಹಿಂದೆ ಐದು ವರ್ಷ ಯಾವ ಮಾದರಿಯಲ್ಲಿ ಆಡಳಿತ ನಡೆಸಿದ್ದೀರಿ ಎಂದು ಬಿಜೆಪಿ ಪರಾಮರ್ಶೆ ಮಾಡಿದರೆ ಒಳಿತು. ಜಿಜೆಪಿಯ ಮಂತ್ರಿಗಳು ಸಾಲು ಸಾಲಗಿ ಜೈಲು ಹೋದಂತೆ ಕಾಂಗ್ರೆಸ್ ನಾಯಕರುಗಳು ಜೈಲಿಗೆ ಹೋಗಿಲ್ಲ ಎಂದು ಲೇವಾಡಿ ಮಾಡಿದ ಅವರು ಕಾಂಗ್ರೆಸ್ ಪಕ್ಷ , ಆಡಳಿತ ಅಥವಾ ಮಂತ್ರಿಗಳ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಬಿಜೆಪಿ ಉಳಿಸಿಕೊಂಡಿಲ್ಲ ಎಂದರು.ರಾಜ್ಯಕ್ಕೆ ಪ್ರೇತ್ಯೇಕವಾದ ಧ್ವಜ ಬೇಕಂದು ರಾಜ್ಯದ ಜನತೆ, ಸಾಹಿತಿಗಳು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದಾಗ ಸಹಜವಾಗಿಯೇ ಮುಖ್ಯಮಂತ್ರಿಗಳು ಈ ಬಗ್ಗೆ ತಜ್ಞರ ಸಮಿತಿಯನ್ನು ರಚಿಸಿದ್ದು, ಇದರಲ್ಲೂ ಬಿಜೆಪಿಯ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್ ಮೊದಲಾದ ಮುಖಂಡರು ರಾಜಕೀಯ ಕಾಣುತ್ತಿರುವುದು ವಿಪರ್ಯಾಸ ಎಂದು ಅವರು ಹೇಳಿದರು.

0 Shares

Facebook Comments

comments