ಜುಲೈ 28 : ನಿಗೂಢವಾಗಿ ಸಾವಿಗೀಡಾಗಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಸಾವಿನ ವಿಚಾರದಂತೆ ತನಿಖೆ ನಡೆಸಲು ಮಂಗಳೂರು ಸಹಾಯಕ ಪೋಲೀಸ್ ಆಯುಕ್ತ ರಾಜೇಂದ್ರ ನೇತೃತ್ವದ ತನಿಖಾ ತಂಡ ಇಂದು ಆಳ್ವಾಸ್ ಕಾವ್ಯಾ ಕಲಿಯುತ್ತಿದ್ದ ಫ್ರೌಢಶಾಲೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದೆ. ಇದೇ ಸಂದರ್ಭದಲ್ಲಿ ಕಾವ್ಯಾ ತಂಗಿದ್ದ ಹಾಸ್ಟೆಲ್ ಗೂ ಭೇಟಿ ನೀಡಿ ಪರಿಶೀಲನೆ ನಡೆಸಿ, ಹಾಸ್ಟೆಲ್ ವಿಧ್ಯಾರ್ಥಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಕಾವ್ಯಾ ವಿಚಾರವಾಗಿ ಮಾಹಿತಿಗಳ ಪರಾಮರ್ಶೆ ನಡೆಸಿದೆ. ಜುಲೈ 20 ರಂದು ಕಾವ್ಯಾ ಆಳ್ವಾಸ್ ನ ಹಾಸ್ಟೆಲ್ ನಲ್ಲಿ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಳು. ಶಾಲಾ ಆಡಳಿತ ಮಂಡಳಿ ಇದನ್ನೊಂದು ಆತ್ಮಹತ್ಯೆ ಪ್ರಕರಣವೆಂದು ಪರಿಗಣಿಸಿದ್ದರೂ, ಕಾವ್ಯಾ ಪೋಷಕರು ಹಾಗೂ ಸಂಬಂಧಿಕರು ಈ ಸಾವಿನ ಹಿಂದೆ ನಿಗೂಢತೆ ಅಡಗಿದೆ ಎನ್ನುವ ಆರೋಪಿಸಿದ ಹಿನ್ನಲೆಯಲ್ಲಿ ಹಾಗೂ ತನಿಖೆಗೆ ಒತ್ತಾಯಿಸಿದ ಕಾರಣ ಇದೀಗ ಮಂಗಳೂರು ನಗರ ಪೋಲೀಸ್ ಆಯುಕ್ತರಾದ ಟಿ. ಸುರೇಶ್ , ಸಹಾಯಕ ಪೋಲೀಸ್ ಆಯುಕ್ತರಿಗೆ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದರು, ಈ ಹಿನ್ನಲೆಯಲ್ಲಿ ಇದೀಗ ಎಸಿಪಿ ತಂಡ ತನ್ನ ತನಿಖೆಯನ್ನು ಆರಂಭಿಸಿದೆ.

Facebook Comments

comments