LATEST NEWS
ಸಿಎಂ ಕುಮಾರಸ್ವಾಮಿ ಹೇಳಿಕೆ ಸೈನಿಕರಿಗೆ ಮಾಡಿದ ಅವಮಾನ – ಆರ್. ಅಶೋಕ್

ಸಿಎಂ ಕುಮಾರಸ್ವಾಮಿ ಹೇಳಿಕೆ ಸೈನಿಕರಿಗೆ ಮಾಡಿದ ಅವಮಾನ – ಆರ್. ಅಶೋಕ್
ಮಂಗಳೂರು ಎಪ್ರಿಲ್ 6: ಪುಲ್ವಾಮ ದಾಳಿ ಬಗ್ಗೆ ಎರಡು ವರ್ಷಗಳ ಹಿಂದೆಯೇ ನನಗೆ ತಿಳಿದಿತ್ತು ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ಮುಖಂಡ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣಾ ತಂತ್ರಗಾರಿಕೆಯಿಂದ ಕುಮಾರಸ್ವಾಮಿ ಈ ಹೇಳಿಕೆ ನೀಡಿದ್ದು, ಇದು ಮುಖ್ಯಮಂತ್ರಿಯವರು ಸೈನಿಕರಿಗೆ ಮಾಡಿದ ಅವಮಾನವಾಗಿದೆ ಎಂದು ಹೇಳಿದರು. ಕುಮಾರಸ್ವಾಮಿಯವರ ಈ ಹೇಳಿಕೆಯಿಂದಾಗಿ ದೇಶದ ಸೈನಿಕರನ್ನು ನಂಬಬೇಕಾ ಕುಮಾರಸ್ವಾಮಿ ಯನ್ನು ನಂಬಬೇಕಾ ಅನ್ನುವಂತಾಗಿದ್ದು, ಕುಮಾರಸ್ವಾಮಿ ಒಳ್ಳೆಯವರಾ ಸೈನಿಕರು ಒಳ್ಳೆಯವರಾ ಎನ್ನುವುದನ್ನು ರಾಜ್ಯದ ಜನ ನಿರ್ಧಾರ ಮಾಡುತ್ತಾರೆ ಎಂದರು.

ಈಗಾಗಲೇ ದೋಸ್ತಿ ಜಗಳ ಬಯಲಿಗೆ ಬಂದಿದ್ದು, ದೇವೇಗೌಡರೇ ಸಿದ್ದರಾಮಯ್ಯ ಮಂಡ್ಯದಲ್ಲಿ ಪ್ರಚಾರ ಮಾಡೋದು ವೇಸ್ಟ್ ಅಂತಾ ಹೇಳಿದ್ದಾರೆ.
ಮಂಡ್ಯದಲ್ಲಿ ಹೆಣ್ಣುಮಗಳನ್ನು ಎದುರಿಸಲಾಗದ ಸರಕಾರ, ಕೌರವರಂತಹ ಘಟಾನುಘಟಿಗಳು ಹೆಣ್ಣುಮಗಳ ಮುಂದೆ ತಲೆ ತಗ್ಗಿಸುವ ಸ್ಥಿತಿ ನಿರ್ಮಾಣವಾಗಿದೆ. ಇಡೀ ಸರಕಾರವೇ ಮಂಡ್ಯದಲ್ಲಿ ಕೂತಿದೆ. ಹೆಣ್ಣು ಮಗಳು ಅವರ ವಿರುದ್ಧ ಫೈಟ್ ಮಾಡ್ತಿದ್ದಾರೆಂದರೆ ಸರಕಾರದ ಯೋಗ್ಯತೆ ಕಾಣುತ್ತದೆ. ನಾವು ಸುಮಲತಾಗೆ ಅವರಿಗೆ ಬೆಂಬಲ ಘೋಷಿಸಿದ್ದೇವೆ.
ಅವರು ಚುನಾವಣೆಯಲ್ಲಿ ಗೆದ್ದೇ ಗೆಲ್ತಾರೆ. ಕಾವೇರಿ ವಿಚಾರದಲ್ಲಿ ಅಂಬರೀಶ್ ಎರಡು ವರ್ಷ ಕೇಂದ್ರ ಸಚಿವ ಸ್ಥಾನ ತ್ಯಾಗ ಮಾಡಿದ್ದಾರೆ. ಅಂತಹ ವ್ಯಕ್ತಿಯ ಶ್ರೀಮತಿಯವರಿಗೆ ಕಿರುಕುಳ ಕೊಟ್ಟು ಅವಮಾನ ಮಾಡೋ ಈ ಸರಕಾರಕ್ಕೆ ಒಳ್ಳೆಯ ಹೆಸರು ಬರಲ್ಲ ಎಂದು ಆರೋಪಿಸಿದರು.
ಮಂಗಳೂರಿನಲ್ಲಿ ಮತ್ತೆ ಬಿಜೆಪಿ ಗೆಲವು ಸಾಧಿಸಲಿದ್ದು, ಮಂಗಳೂರು ಯಾವಾಗಲೂ ಬಿಜೆಪಿಯ ಭದ್ರಕೋಟೆಯಾಗಿದೆ. ವಾಜಪೇಯಿ, ಜನಸಂಘದ ಕಾಲದಿಂದಲೂ ಇಲ್ಲಿ ಬಿಜೆಪಿ ಅಸ್ಥಿತ್ವ ರೂಪಿಸಿದೆ. ಅಲ್ಲದೆ ಮಂಗಳೂರಿನಲ್ಲಿ ಸಂಸದ ನಳಿನ್ ನಡೆಸಿದ ಅಭಿವೃದ್ಧಿ ಜಗಜ್ಜಾಹೀರಾಗಿದೆ. ಅವರ ಕರಪತ್ರದಲ್ಲಿ ಸಾಧನೆ ಲಿಸ್ಟ್ ತೋರಿಸಿದ್ದಾರೆ. ಯಾವುದೇ ಭ್ರಷ್ಟಾಚಾರ ರಹಿತ ಸರಕಾರವೆಂದರೆ ಅದು ಮೋದಿ ಸರಕಾರ ಎಂದು ಮಂಗಳೂರಿನಲ್ಲಿ ಮಾಜಿ ಡಿಸಿಎಂ ಆರ್ ಅಶೋಕ್ ಹೇಳಿದರು.