Connect with us

LATEST NEWS

ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಚಪ್ಪರ ಮುಹೂರ್ತ

ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಚಪ್ಪರ ಮುಹೂರ್ತ

ಮಂಗಳೂರು ಎಪ್ರಿಲ್ 6: ಕರಾವಳಿ ಜಿಲ್ಲೆಗಳ ಲೋಕಸಭಾ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಎಪ್ರಿಲ್ 13 ರಂದು ಮಂಗಳೂರಿಗೆ ಆಗಮಿಸಲಿದ್ದು, ಈ ಹಿನ್ನಲೆಯಲ್ಲಿ ನಗರದ ಕೇಂದ್ರ ಮೈದಾನದಲ್ಲಿ ಇಂದು ಚಪ್ಪರ ಮುಹೂರ್ತ ನಡೆಯಿತು.

ಲೋಕಸಭಾ ಚುನಾವಣೆ ಹಿನ್ನಲೆ ಪ್ರಚಾರ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಎಪ್ರಿಲ್ 13 ರಂದು ಮಂಗಳೂರಿಗೆ ಆಗಮಿಸಲಿದ್ದು, ಮಂಗಳೂರಿನ ಕೇಂದ್ರ ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ನಗರದ ಕೇಂದ್ರ ಮೈದಾನದಲ್ಲಿ ಚಪ್ಪರ ಮುಹೂರ್ತ ನಡೆಯಿತು.

ಬೆಳಗ್ಗೆ 8 ಗಂಟೆಗೆ ಕೇಂದ್ರ ಮೈದಾನದಲ್ಲಿ ಚಪ್ಪರ ಮುಹೂರ್ತ ಕ್ಕೆ ಚಪ್ಪರದ ಕಂಬ ಹಾಕುವುದರ ಮುಖಾಂತರ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕರಾದ ಆರ್. ಅಶೋಕ್ ಚಾಲನೆ ನೀಡಿದರು. ಬಳಿಕ ತೆಂಗಿನಕಾಯಿ ಒಡೆಯುವುದರ ಮೂಲಕ ಎಲ್ಲಾ ಕಾರ್ಯಕರ್ತರು ಮುಹೂರ್ತಕ್ಕೆ ಸಾಥ್ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆರ್ ಅಶೋಕ್, ನಳಿನ್ ಕುಮಾರ್ ಕಟೀಲ್ ಸತತವಾಗಿ ದ.ಕ.ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಬಾರಿ ನಳಿನ್ ಕುಮಾರ್ ಕಟೀಲ್ 2ಲಕ್ಷ ಅಂತರದಲ್ಲಿ ಗೆದ್ದು, ಎದುರಾಳಿಗೆ ಪೆಟ್ಟುಕೊಡಲಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಇಡೀ ದೇಶದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಈಗಾಗಲೇ ಪ್ರಧಾನಿ ಕರ್ನಾಟಕದಲ್ಲಿ ಆರು ಚುನಾವಣಾ ಪ್ರಚಾರದ ರಾಲಿ ನಡೆಸಲಿದ್ದು ಈಗಾಗಲೇ ಒಂದು ರಾಲಿ ಮುಗಿದಿದ್ದು ಎರಡನೇ ರಾಲಿ ಕರಾವಳಿಯಲ್ಲಿ ನಡೆಯಲಿದೆ ಎಂದರು.

Facebook Comments

comments