Connect with us

LATEST NEWS

ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಮತದಾನ ಜಾಗೃತಿ ಪ್ರದರ್ಶನ ಮಳಿಗೆ

ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಮತದಾನ ಜಾಗೃತಿ ಪ್ರದರ್ಶನ ಮಳಿಗೆ

ಮಂಗಳೂರು ಏಪ್ರಿಲ್ 05 : ‘ಓದು ವ್ಯಕ್ತಿತ್ವವನ್ನು ರೂಪಿಸುತ್ತದೆ, ಮತದಾನ ದೇಶವನ್ನು ರೂಪಿಸುತ್ತದೆ’ ಮತದಾನ ಮಾಡಿ; ಎಲ್ಲರಿಗೂ ಮತದಾನ ಮಾಡಲು ಮುಕ್ತ ಹಾಗೂ ನಿರ್ಭೀತ ವಾತಾವರಣವನ್ನು ಕಲ್ಪಿಸಲಾಗಿದ್ದು, ಮತದಾನ ಅಮೂಲ್ಯ; ಮರೆಯದೆ ಮತದಾನ ಮಾಡಿ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಹಾಗೂ ಸ್ವೀಪ್ ನೋಡಲ್ ಅಧಿಕಾರಿ ಡಾ. ಆರ್. ಸೆಲ್ವಮಣಿ ತಿಳಿಸಿದರು.

ಇವರು ಇಂದು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಏರ್ಪಡಿಸಿದ ಮತದಾನ ಜಾಗೃತಿ ಪ್ರದರ್ಶನ ಮಳಿಗೆ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಸ್ವೀಪ್ ಸಮಿತಿಯಿಂದ ಎಲ್ಲ ಮತದಾರರನ್ನು ತಲುಪಲು ವಿವಿಧ ರೀತಿಯ ಸ್ಪರ್ಧೆಗಳು, ಜಾಥಾಗಳು, ಬಹುಮಾಧ್ಯಮ ಪ್ರಚಾರಗಳನ್ನು ಮಾಡಲಾಗಿದೆ. ಏಪ್ರಿಲ್ 05 ರಿಂದ 8 ರವರೆಗೆ ಈ ಪ್ರದರ್ಶನ ನಡೆಯಲಿದ್ದು, ಮಾಹಿತಿ ಇಲ್ಲದೆ ಜನರು ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಪ್ರತಿದಿನವೆಂಬಂತೆ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ರೋಹಿಣಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಜೈಶಾಂತ್ ಹಾಗೂ ಸ್ವೀಪ್ ಸಮಿತಿ ಸದಸ್ಯ ಕಾರ್ಯದರ್ಶಿ ಸುಧಾಕರ್ ಉಪಸ್ಥಿತರಿದ್ದರು.

Facebook Comments

comments