Connect with us

    KARNATAKA

    ರಾಜ್ಯದ ಎಲ್ಲ ಸರಕಾರಿ ನೌಕರರು ಗುರುತಿನ ಚೀಟಿ ಧರಿಸುವುದು ಕಡ್ಡಾಯ!

    ಬೆಂಗಳೂರು, ನವೆಂಬರ್ 05:  ಇನ್ಮುಂದೆ ಸರಕಾರಿ ಕಚೇರಿಯ ಒಳಹೊಕ್ಕ ತಕ್ಷಣ ಆಯು ಹುದ್ದೆಯಲ್ಲಿರುವ ಸರಕಾರಿ ನೌಕರರನ್ನು ತಕ್ಷಣ ಗುರ್ತಿಸಿ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಬಹುದು. ಸಾರ್ವಜನಿಕರು ಸರಕಾರಿ ನೌಕರರನ್ನು ಗುರ್ತಿಸಲು ಸುಲಭವಾಗುವಂತೆ ಎಲ್ಲ ಸಿಬ್ಬಂದಿಗಳು ಕಡ್ಡಾಯವಾಗಿ ಗುರುತಿನ ಚೀಟಿ ಧರಿಸುವಂತೆ ನ.3 ರಂದು ಆದೇಶಿಸಿದೆ.

    ರಾಜ್ಯ ಸರಕಾರದ ಅಧೀನದಲ್ಲಿರುವ ಕಚೇರಿಗಳಲ್ಲಿ ಸಾರ್ವಜನಿಕರು ತಮ್ಮ ನಿತ್ಯ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ನಿತ್ಯ ಆಗಮಿಸುವುದು ಕಾಮನ್‌. ಹೀಗೆ ಬರುವ ಜನರಿಗೆ ಯಾವ ಹುದ್ದೆಯಲ್ಲಿ ಯಾವ ಅಧಿಕಾರಿ ಇರುತ್ತಾರೆ. ಅವರು ಎಲ್ಲಿ ಸಿಗುತ್ತಾರೆ ಎಂಬುದು ಹುಡುಕಾಟ ನಡೆಸಬೇಕಾದ ಸಂದರ್ಭಗಳು ಸಾಮಾನ್ಯ. ಕೆಲವೊಮ್ಮೆ ಇವತ್ತು ಇರುವ ಅಧಿಕಾರಿಗಳ ನಾಳೆ ಇರೋಲ್ಲ. ವರ್ಗಾವಣೆಯೋ, ಒಡಿಯೋ ಹೋಗಿ ಆ ಜಾಗಕ್ಕೆ ಮತ್ತೊಬ್ಬರು ಬಂದು ಕೂತಿರುತ್ತಾರೆ . ಅವರನ್ನೂ ಹುಡುಕಲು ಕಚೇರಿ ಒಳಹೊಕ್ಕ ಸಾರ್ವಜನಿಕರು ಅವರಿಗಾಗಿ ಪರದಾಟ ನಡೆಸುವುದು ಗುಟ್ಟೇನಲ್ಲ. ಟೇಬಲ್‌ ಯಿಂದ ಟೇಬಲ್‌ ಅಲೆಯುವುದು ಸಾಮಾನ್ಯ. ಈ ಅಲೆದಾಟ ತಪ್ಪಿಸಲು ಸರಕಾರ ಮುಂದಾಗಿದ್ದು ಇನ್ಮುಂದೆ ಸರಕಾರಿ ನೌಕರರು ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಬೇಕು.

    ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಯಾವ ಅಧಿಕಾರಿಗಳನ್ನು ಭೇಟಿ ಮಾಡಬೇಕು ಎಂಬ ಮಾಹಿತಿ ಸಾರ್ವಜನಿಕರಿಗೆ ಸರಕಾರಿ ಕಚೇರಿಗಳಲ್ಲಿ ಲಭ್ಯವಿರುವುದಿಲ್ಲ. ಹೀಗಾಗಿ ಬ್ಯಾಂಕ್‌ ಮತ್ತು ಅಂಚೆ ಕಚೇರಿಗಳಲ್ಲಿ ನಮೂದಿಸಿರುವಂತೆ ರಾಜ್ಯ ಸರಕಾರದ ಎಲ್ಲ ಕಚೇರಿಗಳಲ್ಲಿ ಹಾಗೂ ನಿಗಮ ಮಂಡಳಿಗಳಲ್ಲಿ ಅಧಿಕಾರಿ ಸಿಬ್ಬಂದಿಗಳು ಹೆಸರು ಮತ್ತು ಹುದ್ದೆಯ ನಾಮಫಲಕಗಳನ್ನು ಆಳವಡಿಸುವುದು ಹಾಗೂ ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಅಧಿಕಾರಿ, ಸಿಬ್ಬಂದಿ ಗುರುತಿನ ಚೀಟಿ ಧರಿಸುವುದು ಅವಶ್ಯವಾಗಿರುತ್ತದೆ. ಸರಕಾರಿ ಇಲಾಖೆಯ ಸಿಬ್ಬಂದಿಗಳು ಕಡ್ಡಾಯವಾಗಿ ಇಲಾಖೆಯಿಂದ ನೀಡಿರುವ ಗುರುತಿನ ಚೀಟಿಯನ್ನು ಕೊರಳಿಗೆ ಧರಿಸಿ ಪ್ರದರ್ಶನ ಮಾಡಬೇಕು. ಕಚೇರಿಯ ಅಧಿಕಾರಿ ಸಿಬ್ಬಂದಿಗಳು ತಾವು ಕುಳಿತು ಕರ್ತವ್ಯ ನಿರ್ವಹಿಸುವ ಮೇಜಿನ ಮೇಲೆ ಅಧಿಕಾರಿ, ಸಿಬ್ಬಂದಿ ಹೆಸರು ಹುದ್ದೆ ಸೂಚಿಸುವ ನಾಮ ಫಲಕಗಳನ್ನು ಕಡ್ಡಾಯವಾಗಿ ಆಳವಡಿಸಿ ಸಾರ್ವಜನಿಕರ ಸೇವೆಯಲ್ಲಿ ಪಾರದರ್ಶಕತೆಯನ್ನು ತರಲು ಆದೇಶಿಸಿದೆ

    ಸರಕಾರದ ಎಲ್ಲ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳು ತಮ್ಮ ಅಧೀನ ಇಲಾಖೆಗಳಿಗೆ ಹಾಗೂ ಸರಕಾರದ ಅಧೀನದ ನಿಗಮ ಮಂಡಳಿ ಅಧಿಕಾರಿ ಸಿಬ್ಬಂದಿಗೆ ಈ ಆದೇಶವನ್ನು ಪಾಲಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಎಚ್‌.ಸಿ ಹರ್ಷರಾಣಿ ಆದೇಶಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *