Connect with us

KARNATAKA

ಸಂದರ್ಶನದಲ್ಲಿ ಮಹಿಳಾ ಅಧಿಕಾರಿಗೆ ಖಾಸಗಿ ಅಂಗ ಪ್ರದರ್ಶಿಸಿದ ಐಟಿ ಉದ್ಯೋಗಾಕಾಂಕ್ಷಿ..!

ಬೆಂಗಳೂರು, ಜನವರಿ 27: ಕೊರೊನ ನಂತರ ಎಲ್ಲಾ ಉದ್ಯೋಗ ಸಂದರ್ಶನಗಳು ಅಂತರ್ಜಾಲದಲ್ಲಿ ನಡೆಯುತ್ತಿರುವುದರಿಂದ,  ಜೂಮ್‌ ಆ್ಯಪ್‌ ಮೂಲಕ ನಡೆದ ವಿಡಿಯೊ ಸಂದರ್ಶನದ ವೇಳೆ ಉದ್ಯೋಗಾಕಾಂಕ್ಷಿಯೊಬ್ಬ ತನ್ನ ಖಾಸಗಿ ಅಂಗಗಳನ್ನು ತೋರಿಸಿ ಮಹಿಳಾ ನೇಮಕ ಅಧಿಕಾರಿಯೊಂದಿಗೆ ಕೆಟ್ಟದಾಗಿ ವರ್ತಿಸಿರುವ ಕುರಿತು ವೈಟ್‌ಫೀಲ್ಡ್‌ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.ನಗರದ ಐಟಿ ಕಂಪನಿಗೆ ನೇಮಕ ಸಂಬಂಧ ಜ.8ರಂದು ಮಧ್ಯಾಹ್ನ 1 ಗಂಟೆಗೆ ಉದ್ಯೋಗಾಕಾಂಕ್ಷಿ ಆರೋಪಿ ಭೋಪಾಲ್‌ನ ರಾಹುಲ್‌ ಮೆಥಿಲ್‌ನ ಸಂದರ್ಶನ ನಿಗದಿಯಾಗಿತ್ತು. ಮಹದೇವಪುರದ ನಿವಾಸಿಯಾದ ಮಹಿಳಾ ನೇಮಕ ಅಧಿಕಾರಿ ಮತ್ತು ಹಿರಿಯ ಸಾಫ್ಟ್‌ವೇರ್‌ ಎಂಜಿನಿಯರ್‌ ಸಂದರ್ಶನದ ಪ್ಯಾನಲ್‌ನಲ್ಲಿದ್ದರು.

ವಿಡಿಯೊ ಕಾನ್ಫರೆನ್ಸ್‌ ಮೂಲಕ ಆರೋಪಿ ರಾಹುಲ್‌ ಸಂದರ್ಶನದಲ್ಲಿ ಪಾಲ್ಗೊಂಡಿದ್ದ. ಸಂದರ್ಶಕರು ಮಹಿಳೆ ಎಂಬುದನ್ನು ಅರಿತ ಆರೋಪಿ, ಕ್ಯಾಮೆರಾವನ್ನು ತನ್ನ ಖಾಸಗಿ ಭಾಗಗಳ ಕಡೆಗೆ ತಿರುಗಿಸಿದ್ದಾನೆ. ಇದರಿಂದ ಆಘಾತಕ್ಕೊಳಗಾದ ಮಹಿಳಾ ಸಂದರ್ಶಕಿ ಕೂಡಲೇ ಕರೆಯನ್ನು ಮೊಟಕುಗೊಳಿಸಿದ್ದಾರೆ. ನಂತರ ಈ ವಿಷಯನ್ನು ಆಕೆ ಪತಿಗೆ ತಿಳಿಸಿದ್ದು, ಅವರು ಸೈಬರ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ಸಂಬಂಧ ದೂರು ದಾಖಲಿಸಿಕೊಂಡಿರುವ ವೈಟ್‌ಫೀಲ್ಡ್‌ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.