Connect with us

LATEST NEWS

ಇಸ್ರೇಲ್ ನಲ್ಲಿ ಇದ್ದಾರೆ 12 ಸಾವಿರಕ್ಕೂ ಅಧಿಕ ಕರಾವಳಿಗರು….!!

ಮಂಗಳೂರು ಅಕ್ಟೋಬರ್ 09: ಹಮಾಸ್ ಉಗ್ರರ ದಾಳಿಗೆ ತತ್ತರಿಸಿರುವ ಇಸ್ರೇಲ್ ನಲ್ಲಿ 12 ಸಾವಿರಕ್ಕೂ ಅಧಿಕ ಮಂದಿ ಕರ್ನಾಟಕದ ಕರಾವಳಿಯವರಿದ್ದಾರೆ. ಕೇರಳದ ಗಡಿನಾಡು ಮಂಜೇಶ್ವರದಿಂದ ತೊಡಗಿ ಗೋವಾದ ಕಾರವಾರ ಗಡಿವರೆಗಿನ ಮಂದಿ ಇಸ್ರೇಲ್‌ನಲ್ಲಿ ಕೇರ್ ಗೀವರ್ಸ್ ಕೆಲಸ ಮಾಡಿಕೊಂಡಿದ್ದಾರೆ. ಇವರೆಲ್ಲರೂ ಯುದ್ಧಭೂಮಿ ಜೆರುಸಲೇಂನ ಅಕ್ಕಪಕ್ಕ ಇದ್ದರೂ ಸದ್ಯಕ್ಕೆ ಸುರಕ್ಷಿತವಾಗಿದ್ದಾರೆ.


ಇಸ್ರೇಲ್‌ಗೆ ತೆರಳಿದ ಕರಾವಳಿ ಮಂದಿಯಲ್ಲಿ ಶೇಕಡ50ರಷ್ಟು ಮಹಿಳೆಯರೇ ಇದ್ದಾರೆ. ಅದರಲ್ಲೂ ಹೆಚ್ಚಿನವರು ಕ್ರಿಶ್ಚಿಯನ್ನರು. ಸಣ್ಣ ಪ್ರಮಾಣದಲ್ಲಿ ಹಿಂದುಗಳಿದ್ದಾರೆ. ದ.ಕ. ಜಿಲ್ಲೆಯ 8 ಅಧಿಕ ಮಂದಿ ಇದರಲ್ಲಿ ಸೇರಿದ್ದಾರೆ. ಕನ್ನಡಿಗರು ಇಸ್ರೇಲ್‌ನಲ್ಲಿ ಯುದ್ಧಪೀಡಿತ ಪ್ರದೇಶದ ಸನಿಹ ಅಪಾಯವನ್ನೂ ಲೆಕ್ಕಿಸದೆ ಕೆಲಸ ಮಾಡುತ್ತಿದ್ದಾರೆ ಇಸ್ರೇಲ್‌ನ ಜೆರುಸಲೇಂ, ಅವೀವ್ ಅರ್ಜೀಲಿಯಂ ಹಾಗೂ ಹೈಫಾ ಈ ನಾಲ್ಕು ಪ್ರಮುಖ ಪ್ರದೇಶಗಳಲ್ಲಿ ಕರಾವಳಿ ಕನ್ನಡಿಗರಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇದನ್ನು ಹೊರತುಪಡಿಸಿ ಇಡೀ ಇಸ್ರೇಲ್‌ನಲ್ಲಿ ಭಾರತೀಯರು ಅಲ್ಲಲ್ಲಿ ಹಂಚಿಹೋಗಿದ್ದಾರೆ. ಸದ್ಯ ಕರಾವಳಿ ಕನ್ನಡಿಗರು ಇರುವ ಪ್ರದೇಶಗಳಲ್ಲಿ ಯಾವುದೇ ರೀತಿಯ ದಾಳಿ ನಡೆಯದಿದ್ದರೂ ಅಪಾಯದ ಭೀತಿಯಲ್ಲೇ ದಿನ ಕಳೆಯುವಂತಾಗಿದೆ.


ಇಸ್ರೇಲ್‌ನಲ್ಲಿ ಕರಾವಳಿ ಕನ್ನಡಿಗರು ಮಾಡುವ ಕೇರ್ ಗೀವರ್ಸ್ ಕೆಲಸ ಎಂದರೆ, ಇಲ್ಲಿನ ಹೋಂ ನರ್ಸ್ ಮಾದರಿಯಲ್ಲಿ, ಅಲ್ಲಿ ಅಂಗವಿಕಲರು, ವೃದ್ಧರು ನೋಡಿಕೊಳ್ಳುವುದು. ನಾನು ಕಳೆದ 14 ವರ್ಷಗಳಿಂದ ಇಸ್ರೇಲ್‌ನಲ್ಲಿ ಕೇರ್‌ಟೇಕರ್ ಆಗಿ ಕೆಲಸ ಮಾಡುತ್ತಿದ್ದೇನೆ, ಆದರೆ ನಾಗರಿಕರನ್ನು ನಿರ್ದಯವಾಗಿ ಕೊಲ್ಲುವ ಮತ್ತು ಅಪಹರಣ ಮಾಡುವಂತಹ ಪರಿಸ್ಥಿತಿಯನ್ನು ಎಂದಿಗೂ ಅನುಭವಿಸಿಲ್ಲ. ನಾವು ಇಸ್ರೇಲಿ ಪಡೆಗಳ ಮೇಲೆ ನಮ್ಮ ಭರವಸೆಯನ್ನು ಹೊಂದಿದ್ದೇವೆ” ಎಂದು ಮಂಗಳೂರು ಸಮೀಪದ ವಾಮಂಜೂರಿನ ಲೆನಾರ್ಡ್ ಫರ್ನಾಂಡಿಸ್ ಹೇಳಿದರು. ಅವರು ಇಸ್ರೇಲ್‌ನ ಕರಾವಳಿ ನಗರವಾದ ಹೆರ್ಜ್ಲಿಯಾದಲ್ಲಿ ವಾಸಿಸುತ್ತಿದ್ದಾರೆ. ಹಮಾಸ್ ಸೈನಿಕರು ಇಸ್ರೇಲ್‌ಗೆ ನುಸುಳಿ, ನಾಗರಿಕರನ್ನು ಕೊಂದು ಸಾವಿರಾರು ರಾಕೆಟ್‌ಗಳನ್ನು ಹೊಡೆದು ಒಂದು ದಿನದ ನಂತರ ಟೆಲ್ ಅವಿವ್, ಜೆರುಸಲೆಮ್, ರಮತ್ ಹಶರೋನ್, ಗಾಶ್ ಕಿಬ್ಬುಟ್ಜ್ ಮತ್ತು ಇಸ್ರೇಲ್‌ನ ಇತರ ನಗರಗಳಲ್ಲಿ ಕೆಲಸ ಮಾಡುವ ಅನೇಕ ಮಂಗಳೂರಿಯನ್ನರು ತಮ್ಮ ದುಃಸ್ಥಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *