LATEST NEWS
ಕೊನೆಗೂ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿಗೆ – 15 ತಿಂಗಳ ಯುದ್ದ ಅಂತ್ಯ..?
ಇಸ್ರೇಲ್ ಜನವರಿ 18: ಇಸ್ರೇಲ್ ಹಾಗೂ ಗಾಜಾದ ಹಮಾಸ್ ಬಂಡುಕೋರರ ನಡುವೆ 15 ತಿಂಗಳಿನಿಂದ ನಡೆಯುತ್ತಿದ್ದ ಭೀಕರ ಯುದ್ದ ಅಂತಿಮ ಘಟ್ಟ ತಲುಪಿದೆ. ಶುಕ್ರವಾರ ತಡರಾತ್ರಿ ಇಸ್ರೇಲ್ ಕ್ಯಾಬಿನೆಟ್ ಹಮಾಸ್ ಜೊತೆಗಿನ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದೆ.
ಗಾಜಾ – ಇಸ್ರೇಲ್ ಯುದ್ಧ ಅಕ್ಟೋಬರ್ 7, 2023 ರಂದು ಪ್ರಾರಂಭವಾಗಿತ್ತು.ಹಮಾಸ್ ಉಗ್ರರು ಇಸ್ರೇಲ್ ಗೆ ನುಗ್ಗಿ ಸಾವಿರಾರು ಜನರನ್ನು ಕೊಂದು ಹಾಕಿದ್ದರು, ಇದಕ್ಕೆ ಪ್ರತಿಕಾರವಾಗಿ ಗಾಜಾ ಮೇಲೆ ಯುದ್ದ ಸಾರಿ ಇಸ್ರೇಲ್ ಇಡೀ ಗಾಜಾಪಟ್ಟಿಯನ್ನೇ ನಿರ್ನಾಮ ಮಾಡಿದೆ. ಈ ಯುದ್ದದಲ್ಲಿ ಯಾರೆಲ್ಲಾ ಹಮಾಸ್ ಉಗ್ರರಿಗೆ ಪರವಾಗಿ ನಿಂತಿದ್ದರೋ ಅವರನ್ನೆಲ್ಲಾ ಇಸ್ರೇಲ್ ಮುಗಿಸಿದೆ. ಇದುವರೆಗೆ ಈ ಯುದ್ದದಲ್ಲಿ ಇಸ್ರೇಲ್ ದೇಶದ 1,200ಕ್ಕೂ ಹೆಚ್ಚು ನಾಗರೀಕರು ಮತ್ತು ಪ್ಯಾಲೇಸ್ತೇನ್ ದೇಶದ 46 ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ 15 ತಿಂಗಳ ಯುದ್ಧಕ್ಕೆ ಕೊನೆಗೂ ವಿರಾಮ ಬಿದ್ದಂತಾಗಿದೆ. ಈಗ, ಜಾಗತಿಕ ಒತ್ತಡದ ಹಿನ್ನಲೆಯಲ್ಲಿ ಕೊನೆಗೂ ಇಸ್ರೇಲ್, ಕದನ ವಿರಾಮದ ಐತಿಹಾಸಿಕ ಕಡತಕ್ಕೆ ಸಹಿಹಾಕಿದೆ. ಹಲವು ದೇಶಗಳು ಹಮಾಸ್ ವಿರುದ್ದ ಯುದ್ದ ಕೊನೆಗಾಣಿಸಲು ಪ್ರಯತ್ನಿಸುತ್ತಾ ಬರುತ್ತಿದ್ದರೂ, ಇಸ್ರೇಲ್ ಅದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಹಮಾಸ್ ಜೊತೆಗಿನ ಕದನ ವಿರಾಮಕ್ಕೆ ಮೂಲ ಕಾರಣವಾಗಿದ್ದು ಮೂರು ದೇಶಗಳು. ಅವುಗಳೆಂದರೆ, ಅಮೆರಿಕಾ, ಈಜಿಪ್ಟ್ ಮತ್ತು ಕತಾರ್. ಈ ದೇಶಗಳು ಸತತವಾಗಿ ಇಸ್ರೇಲ್ ಮನವೊಲಿಸುವ ಕೆಲಸವನ್ನು ಮಾಡುತ್ತಲೇ ಬಂದವು. ಮೊದಲು, ಎರಡು ದೇಶಗಳ ರಾಯಭಾರಿಗಳ ನಡುವೆ ಕತಾರ್ ದೇಶದ ದೋಹಾದಲ್ಲಿ ಮೊದಲ ಸುತ್ತಿನ ಮಾತುಕತೆ ನಡೆದಿತ್ತು.