LATEST NEWS
ರಾಜಧಾನಿಯಲ್ಲಿ ಐಸಿಸ್ ಉಗ್ರನ ಹೆಜ್ಜೆ ಪತ್ತೆಹಚ್ಚಿದ ಪೋಲೀಸರು…

ನವದೆಹಲಿ, ಆಗಸ್ಟ್ 22: ದೇಶದೆಲ್ಲೆಡೆ ಗಣೇಶ ಚತುರ್ಥಿಯ ಸಂಭ್ರಮದ ನಡುವೆ ರಾಜಧಾನಿ ದೆಹಲಿಯಲ್ಲಿ ಪೋಲೀಸರು ಐಸಿಸ್ ಉಗ್ರನೊರ್ವನನ್ನು ಬಂಧಿಸಿದ್ದಾರೆ. ದೆಹಲಿಯ ದಾವೂಲ್ ಕಾನಾ ಪ್ರದೇಶದಲ್ಲಿ ಉಗ್ರನ ಚಟುವಟಿಕೆಯ ಮಾಹಿತಿ ಪಡೆದ ದೆಹಲಿ ಪೋಲೀಸ್ ಸ್ಪೆಷಲ್ ಸೆಲ್ ದಾಳಿ ನಡೆಸಿ ಉಗ್ರನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವಶಕ್ಕೆ ಪಡೆದುಕೊಂಡ ಉಗ್ರನನ್ನು ಉತ್ತರಪ್ರದೇಶದ ಬಲರಾಮ್ ಪುರ ನಿವಾಸಿ ಅಬ್ದುಲ್ ಯೂಸುಫ್ ಎಂದು ಗುರುತಿಸಲಾಗಿದೆ. ಈತನ ಬಳಿಯಿಂದ 30 ಬೋರ್ ಪಿಸ್ತೂಲ್, IED, 4 ಜೀವಂತ ಗುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈತ ಇಸ್ಲಾಮಿಕ್ ಸ್ಟೇಟ್ ಆಫ್ ಸಿರಿಯಾ ಸಂಘಟನೆಯ ಅಫ್ಘಾನಿಸ್ತಾನದ ವಿಭಾಗವಾಗಿರುವ ಇಸ್ಲಾಮಿಕ್ ಸ್ಟೇಟ್ ಆಫ್ ಕೂರಾಸ್ತಾನ್ ಇದರ ಕಮಾಂಡರ್ ಗಳ ನಿರಂತರ ಸಂಪರ್ಕದಲ್ಲಿದ್ದ ಸ್ಟೋಟಕ ಮಾಹಿತಿ ಪೋಲೀಸರಿಗೆ ಲಭಿಸಿದೆ.

ದೇಶದ ಹಲವು ಕಡೆಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಈತ ಅಣಿಯಾಗಿದ್ದ ಎನ್ನುವ ಮಾಹಿತಿಯೂ ದೊರೆತಿದ್ದು. ಹೆಚ್ಚಿನ ತನಿಖೆಗಾಗಿ ಈತನನ್ನು ಎನ್.ಐ.ಎ ಗೆ ವಹಿಸುವ ಸಾಧ್ಯತೆಯಿದೆ. ಈತನಿಂದ ವಶಪಡಿಸಿಕೊಂಡ IED ಯನ್ನು ಎನ್.ಎಸ್.ಜಿ ಕಮಾಂಡೋಗಳು ನಾಶಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.