LATEST NEWS
ಹೆಲಿಕಾಪ್ಟರ್ ದುರಂತದಲ್ಲಿ ಇರಾನ್ ಅಧ್ಯಕ್ಷ, ವಿದೇಶಾಂಗ ಸಚಿವ ದುರ್ಮರಣ

ದುಬೈ,: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಸಂಪೂರ್ಣ ಸುಟ್ಟು ಕರಕಲಾಗಿದ್ದು ಅದರಲ್ಲಿದ್ದವರು ಯಾರೂ ಬದುಕುಳಿದಿಲ್ಲ ಎಂದು ಸರ್ಕಾರಿ ಮಾಧ್ಯಮ ದೃಢಪಡಿಸಿದೆ.
ಹೆಲಿಕಾಪ್ಟರ್ ಪತನಕ್ಕೀಡಾದ ಪ್ರದೇಶ ಕಡಿದಾದ ಕಣಿವೆಯಲ್ಲಿದೆ. ರಕ್ಷಕರು ಅದನ್ನು ತಲುಪಲು ಇನ್ನೂ ಸಾಧ್ಯವಾಗಿಲ್ಲ ಎಂದು ಸರ್ಕಾರಿ ಮಾಧ್ಯಮ ತಿಳಿಸಿದೆ. ಇಂದು ಸೂರ್ಯ ಉದಯಿಸುತ್ತಿದ್ದಂತೆ, ರಕ್ಷಕರು ಹೆಲಿಕಾಪ್ಟರ್ ನ್ನು ಸುಮಾರು 2 ಕಿಲೋಮೀಟರ್ (1.25 ಮೈಲುಗಳು) ದೂರದಿಂದ ನೋಡಿದ್ದಾರೆ ಎಂದು ಇರಾನಿನ ರೆಡ್ ಕ್ರೆಸೆಂಟ್ ಸೊಸೈಟಿಯ ಮುಖ್ಯಸ್ಥ ಪಿರ್ ಹೊಸೈನ್ ಕೊಲಿವಾಂಡ್ ಸರ್ಕಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಹೆಲಿಕಾಪ್ಟರ್ ನಿನ್ನೆ ಪತನಗೊಂಡಿತ್ತು. ಅದರಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಹೊಸೈನ್ ಅಮಿರಾಬ್ಡೊಲ್ಹಿಯಾನ್, ಅಧಿಕಾರಿಗಳು ಮತ್ತು ಇತರರು ಪ್ರಯಾಣಿಸುತ್ತಿದ್ದರು.
ಇಬ್ರಾಹಿಂ ರೈಸಿ ಮತ್ತು ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ನೇತೃತ್ವದಲ್ಲಿ ಇರಾನ್ ಕಳೆದ ತಿಂಗಳು ಇಸ್ರೇಲ್ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಿತ್ತು. ಯುರೇನಿಯಂನ್ನು ಶಸ್ತ್ರಾಸ್ತ್ರ-ದರ್ಜೆಯ ಮಟ್ಟಕ್ಕೆ ಎಂದಿಗಿಂತಲೂ ಹತ್ತಿರದಲ್ಲಿ ಉತ್ಕ್ರೃಷ್ಠಗೊಳಿಸಿತ್ತು.

#BREAKING: Image of the wreckage of #Iran's regime's president Ebrahim Raisi's helicopter in pieces. The Butcher of Tehran is dead. pic.twitter.com/JdnxsVK5Zx
— Jason Brodsky (@JasonMBrodsky) May 20, 2024
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿಯೊಂದಿಗೆ ಇರಾನ್‌ನ ವಿದೇಶಾಂಗ ಸಚಿವ ಹೊಸೈನ್ ಅಮಿರಾಬ್ದೊಲ್ಲಾಹಿಯಾನ್, ಇರಾನ್‌ನ ಪೂರ್ವ ಅಜೆರ್‌ಬೈಜಾನ್ ಪ್ರಾಂತ್ಯದ ಗವರ್ನರ್, ಇತರ ಅಧಿಕಾರಿಗಳು ಮತ್ತು ಅಂಗರಕ್ಷಕರು ಇದ್ದರು ಎಂದು ಸರ್ಕಾರಿ ಐಆರ್‌ಎನ್‌ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.