Connect with us

    LATEST NEWS

    ಖ್ಯಾತ ಇರಾನಿ ಚಲನಚಿತ್ರ ನಿರ್ದೇಶಕ ದಾರಿಯುಶ್ ಮೆಹ್ರ್ ಜುಯಿ ದಂಪತಿಯ ಇರಿದು ಹತ್ಯೆ..!

    ಟೆಹ್ರಾನ್: ಖ್ಯಾತ ಇರಾನಿ ಚಲನಚಿತ್ರ ನಿರ್ದೇಶಕ ದಾರಿಯುಶ್ ಮೆಹ್ರ್ ಜುಯಿ ಹಾಗೂ ಅವರ ಪತ್ನಿಯನ್ನು ಇರಿದು ಹತ್ಯೆ ಮಾಡಲಾಗಿದೆ.

    ಮೆಹ್ರ್ ಜುಯಿ ಹಾಗೂ ಅವರ ಪತ್ನಿಯು ಮೃತಪಟ್ಟ ಸ್ಥಿತಿಯಲ್ಲಿ ಅವರದೇ ಮನೆಯಲ್ಲಿ ಪತ್ತೆಯಾಗಿದ್ದು, ಅವರ ಕತ್ತಿನ ಸುತ್ತ ಇರಿತದ ಗಾಯಗಳು ಕಂಡು ಬಂದಿವೆ.

    ಇರಾನ್ ರಾಜಧಾನಿ ಟೆಹ್ರಾನ್ ನ ಪಶ್ಚಿಮದಿಂದ 30 ಕಿಮೀ ದೂರವಿರುವ ಉಪ ಪಟ್ಟಣದಲ್ಲಿರುವ ಮೆಹ್ರ್ ಜುಯಿ ಅವರ ನಿವಾಸಕ್ಕೆ ಶನಿವಾರ ರಾತ್ರಿ ಅವರ ಪುತ್ರಿ ಮೋನಾ ಮೆಹ್ರ್ ಜುಯಿ ಭೇಟಿ ನೀಡಿದಾಗ ತನ್ನ ತಂದೆ-ತಾಯಿಯ ಮೃತದೇಹಗಳನ್ನು ಕಂಡಿದ್ದಾರೆ ಎಂದು ಫಝೇಲಿ ತಿಳಿಸಿದ್ದಾರೆ.

    ತನಿಖಾ ಸಂಸ್ಥೆಗಳು ಘಟನೆಯ ಕುರಿತು ತನಿಖೆಯನ್ನು ಕೈಗೆತ್ತಿಕೊಂಡಿದೆ.

    ಕೆಲವು ವಾರಗಳ ಹಿಂದಷ್ಟೆ ಮೆಹ್ರ್ ಜುಯಿ ಅವರ ಪತ್ನಿಯು ತನಗೆ ಬೆದರಿಕೆ ಇರುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅಳುಕು ತೋಡಿಕೊಂಡಿದ್ದರು.

    ಘಟನೆಯ ಕುರಿತು ಖ್ಯಾತ ಇರಾನಿ ನಟ ಹೌಮನ್ ಸೈಯ್ಯದಿ ಆಘಾತ ವ್ಯಕ್ತಪಡಿಸಿದ್ದಾರೆ.

    ಮೆಹ್ರ್ ಜುಯಿ (83) ಅವರು 1970ರ ದಶಕದಲ್ಲಿ ನೈಜ ಕತೆಗಳನ್ನು ಕೇಂದ್ರೀಕರಿಸಿದ ಹೊಸ ಅಲೆಯ ಚಿತ್ರಗಳ ನಿರ್ಮಾಣದ ಸಹ ಸಂಸ್ಥಾಪಕ ಆಗಿದ್ದರು.

    1988ರಲ್ಲಿನ ಚಿಕಾಗೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ 1993ರಲ್ಲಿನ ಸ್ಯಾನ್ ಸೆಬಾಸ್ಟಿಯನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೋಲ್ಡನ್‌ ಸೀಶೆಲ್‌ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರು.

     

    Share Information
    Advertisement
    Click to comment

    You must be logged in to post a comment Login

    Leave a Reply