Connect with us

LATEST NEWS

ಕರ್ನಾಟಕದ ದಕ್ಷ, ನಿಷ್ಠ, ಪ್ರಾಮಾಣಿಕ ಪೊಲೀಸ್​ ಅಧಿಕಾರಿ ಪಂಚಭೂತಗಳಲ್ಲಿ ಲೀನ

ಕರ್ನಾಟಕದ ದಕ್ಷ, ನಿಷ್ಠ, ಪ್ರಾಮಾಣಿಕ ಪೊಲೀಸ್​ ಅಧಿಕಾರಿ ಪಂಚಭೂತಗಳಲ್ಲಿ ಲೀನ

ಉಡುಪಿ ಡಿಸೆಂಬರ್ 30 : ದಕ್ಷ, ನಿಷ್ಠ, ಪ್ರಾಮಾಣಿಕರೆನಿಸಿಕೊಂಡಿದ್ದ ಖ್ಯಾತ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ದೇಹ ಇಂದು ಹುಟ್ಟೂರು ಯಡಾಡಿಯಲ್ಲಿ ಪಂಚಭೂತಗಳಲ್ಲಿ ಲೀನವಾಯಿತು.

ಹುಟ್ಟೂರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಯಡಾಡಿ-ಮತ್ಯಾಡಿಯಲ್ಲಿ ಬಂಟ ಸಂಪ್ರದಾಯದಂತೆ ನಡೆದ ಅಂತಿಮ ವಿಧಿ ವಿಧಾನದಲ್ಲಿ ಸೋದರರಾದ ಮುರಳಿ ಶೆಟ್ಟಿ, ಸುಧಾಕರ್​ ಶೆಟ್ಟಿ, ಮಗಳು ಸಮ್ಯ, ಅಣ್ಣನ ಮಗ ಸಾರಂಗ್​ ಮಧುಕರ ಶೆಟ್ಟಿ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಸಾವಿರಾರು ಜನ ಹಿತೈಷಿಗಳು, ಸಹೋದ್ಯೋಗಿಗಳು, ಊರವರು, ಅಭಿಮಾನಿ ಬಳಗವು  ಅವರಿಗೆ ಅಂತಿಮ ಗೌರವ ಸಲ್ಲಿಸಿತು.

ಬೆಳಿಗ್ಗಿನಿಂದಲೇ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಯಡಾಡಿಯತ್ತ ಮಧುಕರ್ ಶೆಟ್ಟಿಯವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬಂತು. ಹನ್ನೆರಡು ಗಂಟೆ ಸುಮಾರಿಗೆ ಸಕಲ ಸರಕಾರಿ ಗೌರವಗಳೊಂದಿಗೆ ಅವರನ್ನು ಬೀಳ್ಕೊಡಲಾಯಿತು.

ಮೊನ್ನೆ ರಾತ್ರಿ ಹೈದರಾಬಾದ್ ನಲ್ಲಿ ಕೊನೆಯಸಿರೆಳೆದ ಮಧುಕರ್ ಶೆಟ್ಟಿ ಅವರಿಗೆ ಸಕಲ ಸರಕಾರಿ ಗೌರವಗಳೊಂದಿಗೆ ಇವತ್ತು ಮಧ್ಯಾಹ್ನ ಅಂತ್ಯ ಸಂಸ್ಕಾರ ನಡೆಯಿತು.

ನಿನ್ನೆ ತಡರಾತ್ರಿ ಮಧುಕರ್ ಶೆಟ್ಟಿಯವರ ಪಾರ್ಥೀವ ಶರೀರವನ್ನು ಮಂಗಳೂರಿನಿಂದ ಸ್ವಗ್ರಾಮ ಯಡಾಡಿಗೆ ತರಲಾಗಿತ್ತು. ಆ ಕ್ಷಣದಿಂದ ಶುರುವಾದ ಜನಸಾಗರ ,ಮಧ್ಯಾಹ್ನ ಚಿತೆಗೆ ಅಗ್ನಿಸ್ಪರ್ಶ ಮಾಡುವವರೆಗೂ ಬೆಳೆಯುತ್ತಲೇ ಇತ್ತು.  ಸಚಿವ ಯುಟಿ ಖಾದರ್, ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಸಹಿತ ಕರಾವಳಿಯ ಜನಪ್ರತಿನಿಧಿಗಳು ಅಂತಿಮ ಸಂಸ್ಕಾರದವರೆಗೂ ಮಾರ್ಗದರ್ಶನ  ನೀಡುತ್ತಿದ್ದರು.

ಐಜಿಪಿ ಸ್ಟೀಫನ್ ರವೀಂದ್ರ ,ಮಧುಸೂಧನ್ ರೆಡ್ಡಿ ,ಐಜಿಪಿ ಜಿ.ಎಸ್ ರಾವ್ ,ಡಿಜಪಿ ಎನ್ ಪಿಎ ಬರ್ಮನ್ ಸಹಿತ  ಹಿರಿಯ ಪೊಲೀಸ್ ಅಧಿಕಾರಿಗಳು ಸರಕಾರಿ ಗೌರವಕ್ಕೆ ವ್ಯವಸ್ಥೆ ಮಾಡಿದ್ದರು. ಅಂತಿಮ ಗೌರವ ನೀಡಲು ಬಂದ ಪ್ರತಿಯೊಬ್ಬರಿಗೂ ಅವಕಾಶ ನೀಡಿದ ಬಳಿಕ ,ಸಹೋದರ ಮುರಳಿ ಶೆಟ್ಟಿ ಚಿತೆಗೆ ಅಗ್ನಿ ಸ್ಪರ್ಶ ನೀಡುವುದರೊಂದಿಗೆ ಮಧುಕರ್ ಶೆಟ್ಟಿ ಆತ್ಮ ಪಂಚಭೂತಗಳಲ್ಲಿ ಲೀನವಾಯಿತು.

ಮಧುಕರ ಶೆಟ್ಟಿ ಅವರ ತಂದೆ, ನಾಡಿನ ಹಿರಿಯ ಪತ್ರಕರ್ತರಾಗಿದ್ದ ವಡ್ಡರ್ಸೆ ರಘುರಾಮ ಶೆಟ್ಟರು ಮತ್ತು ತಾಯಿಯ ಸಮಾಧಿ ಪಕ್ಕದಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ಬೆಳಿಗ್ಗೆ ಅಂತಿಮ ದರ್ಶನಕ್ಕೆ ಬಂದ ಜನಸಾಗರ, ಚಿತೆಗೆ ಅಗ್ನಿ ಸ್ಪರ್ಶ ಮಾಡುವವರೆಗೂ ಇದ್ದು ಅವರ ಮೇಲಿನ ಪ್ರೀತಿ ಅಭಿಮಾನವನ್ನು ಪ್ರಕಟಿಸಿತು. ಅಂತಿಮವಾಗಿ  ಈ ನೆಲದ ಒಬ್ಬ ದಕ್ಷ, ಖಡಕ್ ಅಧಿಕಾರಿ ಜನಮಾನಸದಲ್ಲಿ ಅಜರಾಮರರಾದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *