MANGALORE
ಡಿವೈಎಫ್ಐ ಯಿಂದ ಪಂಪ್ ವೆಲ್ ಮೇಲ್ಸೇತುವೆ ಉದ್ಘಾಟನಾ ಕಾರ್ಯಕ್ರಮ !
ಡಿವೈಎಫ್ಐ ಯಿಂದ ಪಂಪ್ ವೆಲ್ ಮೇಲ್ಸೇತುವೆ ಉದ್ಘಾಟನಾ ಕಾರ್ಯಕ್ರಮ !
ಮಂಗಳೂರು ಡಿಸೆಂಬರ್ 30: ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿಯನ್ನು ಈ ವರ್ಷದ ಡಿಸೆಂಬರ್ 30 ರೊಳಗೆ ಪೂರ್ಣಗೊಳಿಸುವುದಾಗಿ ಹೇಳಿ ಇನ್ನು ಅರ್ಧದಷ್ಟು ಕಾಮಗಾರಿ ಪೂರ್ಣಗೊಳಿಸದೇ ಸಾಧ್ಯವಾಗದೇ ಇರುವ ಹಿನ್ನಲೆಯಲ್ಲಿ ಡಿವೈಎಫ್ ಐ ಇಂದು ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಹೆದ್ದಾರಿ ಪ್ರಾಧಿಕಾರದ ನಿಷ್ಕ್ರಿಯತೆಯನ್ನು ಖಂಡಿಸಿ ನರೇಂದ್ರ ಮೋದಿ, ನಿತಿನ್ ಗಡ್ಕರಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮುಖವಾಡ ಧರಿಸಿದ ವ್ಯಕ್ತಿಗಳನ್ನು ಮೆರವಣಿಗೆಯಲ್ಲಿ ಕರೆತಂದು ಮೇಲ್ಸೇತುವೆ ಉದ್ಘಾಟನಾ ಕಾರ್ಯಕ್ರಮ ನಡೆಸಿತು.
ನಂತರ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಅಚ್ಛೇ ದಿನ್ ಕೊಡುತ್ತೇವೆ ಎನ್ನುತ್ತಾ ಅಧಿಕಾರಕ್ಕೆ ಬಂದ ಮೋದಿ ಸರ್ಕಾರಕ್ಕೆ ಇದುವರೆಗೆ ಒಂದು ಅಚ್ಛೇ ಸಡಕ್ ಅಂದರೆ ಉತ್ತಮ ರಸ್ತೆ ಕೊಡಲು ಸಾಧ್ಯವಾಗಿಲ್ಲ.
ಇದಕ್ಕೆ ಮಂಗಳೂರಿನ ಪಂಪುವೆಲ್ , ತೊಕ್ಕೊಟ್ಟು ರಸ್ತೆಗಳೇ ತಾಜಾ ಉದಾಹರಣೆ ಎಂದರು. ಇಂದು ನಾವು ಇಲ್ಲಿ ನಡೆಸಿದ ಅಣುಕು ಉದ್ಘಾಟನೆ ಇಲ್ಲಿನ ಸಂಸದರು ಮಾತು ತಪ್ಪಿದ್ದನ್ನು ಎತ್ತಿ ತೋರಿಸಿ, ಅವರು ಆಡುತ್ತಿರುವ ಸುಳ್ಳಿನ ಬಗ್ಗೆ ಜನಗಳಲ್ಲಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದು ಇನ್ನಾದರೂ ಸಂಸದರು ಸುಳ್ಳು ಹೇಳುವುದು ಬಿಟ್ಟು ಕೆಲಸ ಮಾಡಿ ತೋರಿಸಲಿ ಎಂದರು.
Facebook Comments
You may like
ಪೆಟ್ರೋಲ್ ಬೆಲೆ ಏರಿಕೆ ವಿರುದ್ದ ಉಡುಪಿಯಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ
ಕೇರಳದಲ್ಲಿ ಆರ್ಎಸ್ಎಸ್ ಕಾರ್ಯಕರ್ತನ ಕೊಲೆ
ಬೆಂಗಳೂರು ಬಿಜೆಪಿ ವಕ್ತಾರರಾಗಿ ನಟ ಜಗ್ಗೇಶ್ ನೇಮಕ
ಸಾಸ್ತಾನ ನವಯುಗ ಟೋಲ್ ಗೇಟ್ ವಿರುದ್ದ ಸ್ಥಳೀಯರ ಬೃಹತ್ ಪ್ರತಿಭಟನಾ ಸಭೆ
ಟಾಪ್ ಲೆಸ್ ಪೋಟೋ ದಲ್ಲಿ ಗಣೇಶ ವಿಗ್ರಹ..ಪಾಪ್ ಸಿಂಗರ್ ರಿಹಾನ್ ವಿರುದ್ದ ಆಕ್ರೋಶ
ಟೋಲ್ ಗೇಟ್ ಗಳಲ್ಲಿ ಸ್ಥಳೀಯರಿಗೆ ವಿನಾಯಿತಿಗೆ ಆಗ್ರಹಿಸಿ ಪ್ರತಿಭಟನೆ
You must be logged in to post a comment Login