MANGALORE
ಜನವರಿಯಲ್ಲಿ ಅಂತರಾಷ್ಟ್ರೀಯ ಕೊಂಕಣಿ ಭಾಷಾ ಸಮ್ಮೇಳನ
ಜನವರಿಯಲ್ಲಿ ಅಂತರಾಷ್ಟ್ರೀಯ ಕೊಂಕಣಿ ಭಾಷಾ ಸಮ್ಮೇಳನ
ಮಂಗಳೂರು, ಸೆಪ್ಟೆಂಬರ್ 28 : ಕೊಂಕಣಿಯ ಮಾನ್ಯತೆಯ ಬೆಳ್ಳಿ ಹಬ್ಬದ ಆಚರಣೆಯ ಪ್ರಯುಕ್ತವಾಗಿ ಕೊಂಕಣಿ ಅಕಾಡೆಮಿಯು ಒಂದು ಮಹತ್ವದ ಕಾರ್ಯಕ್ರಮವಾಗಿ ಅಂತರಾಷ್ಟ್ರೀಯ ಮಟ್ಟದ ಕೊಂಕಣಿ ಭಾಷಾ ಸಮ್ಮೇಳನವನ್ನು ಮುಂದಿನ ಜನವರಿ 2018ರಲ್ಲಿ ಆಯೋಜಿಸಲಿದೆ.
ಈ ಪ್ರಯುಕ್ತ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ.ನಾಯ್ಕ್ ಇವರು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ 150ನೇ ವರ್ಷಾಚರಣೆಯ ಪೂರ್ವ ಭಾವಿ ಸಭೆಯಲ್ಲಿ ಅಧಿಕೃತ ಘೋಷಣೆಯನ್ನು ಮಾಡಿರುತ್ತಾರೆ. ಮಂಗಳೂರು ವಿಶ್ವ ವಿದ್ಯಾನಿಲಯವು ಎಂ.ಎ.ಕೊಂಕಣಿಯನ್ನು ಆರಂಭಿಸಿ ಪ್ರೊತ್ಸಾಹಿಸಿದ ಬಗ್ಗೆ ಮಾನ್ಯ ಕುಲಸಚಿವರಿಗೆ ಅಭಿನಂದಿಸಲಾಯಿತು. ಕೊಂಕಣಿ ಅಕಾಡೆಮಿಯ ಸ್ಥಾಪನೆಗೆ ಕಾರಣೀಕರ್ತರಾದ ಮಾಜಿ ಕೇಂದ್ರ ಸಚಿವ ಹಾಗೂ ಸಂಸದರಾಗಿರುವ ವೀರಪ್ಪ ಮೊಯಿಲಿಯವರು 150ನೇ ವರ್ಷಾಚರಣೆಯ ಸಮಿತಿಯ ಅಧ್ಯಕ್ಷರಾಗಿದ್ದು, ಈ ಬಗ್ಗೆ ಸಮಿತಿಯು ಆಯೋಜಿಸಿರುವ ವಿವಿಧ ಯೋಜನೆಗಳ ಜತೆಗೆ ಈ ಕೊಂಕಣಿ ಸಮ್ಮೇಳನವನ್ನು ಆಯೋಜಿಸಲು ಅವಕಾಶ ಕಲ್ಪಿಸಿರುವ ಬಗ್ಗೆ ಆಕಾಡೆಮಿಯು ಹರ್ಷ ವ್ಯಕ್ತಪಡಿಸಿದೆ.
You must be logged in to post a comment Login