LATEST NEWS
ಹಿಂದೂ ಧರ್ಮದ ಅವಹೇಳನೆಯನ್ನು ನೈಜ ಮುಸಲ್ಮಾನ ಒಪ್ಪಲು ಸಾಧ್ಯವಿಲ್ಲ – ರಹೀಂ ಉಚ್ಚಿಲ್
ಹಿಂದೂ ಧರ್ಮದ ಅವಹೇಳನೆಯನ್ನು ನೈಜ ಮುಸಲ್ಮಾನ ಒಪ್ಪಲು ಸಾಧ್ಯವಿಲ್ಲ – ರಹೀಂ ಉಚ್ಚಿಲ್
ಮಂಗಳೂರು ಅಕ್ಟೋಬರ್ 21: ಅಭಿವ್ಯಕ್ತಿ ಸ್ವಾತಂತ್ರ್ಯ ದ ಹೆಸರಿನಲ್ಲಿ ಹಿಂದೂ ಧರ್ಮದ ಬಗ್ಗೆ ಹಾಗೂ ಹಿಂದೂ ಧರ್ಮದ ದೇವ ದೇವತೆಗಳ ಬಗ್ಗೆ ಅವಮಾನಕರ ಹೇಳಿಕೆ ನೀಡಿರುವ ನಿಡುಮಾಮಿಡಿ ಶ್ರೀಗಳ ಹೇಳಿಕೆಯನ್ನು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ವಿಲ್ ತೀವ್ರ ವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ರಹೀಂ ಉಚ್ಚಿಲ್ ಸಮಾಜದ ಎಲ್ಲಾ ವರ್ಗಕ್ಕೂ ಮಾರ್ಗದರ್ಶನ ನೀಡಬೇಕಾದ ಸ್ವಾಮೀಜಿ ಯವರು ಒಂದು ಧರ್ಮದ ಜನರ ಧಾರ್ಮಿಕ ಭಾವನೆಗೆ ದಕ್ಕೆ ತರುವ ಮಾತಾಡುವುದು ಸರಿಯಲ್ಲ. ಇನ್ನೊಂದು ಧರ್ಮವನ್ನು ಅವಹೇಳನೆ ಮಾಡುವುದನ್ನು ಹಾಗೂ ಪರಧರ್ಮದ ದೇವ ದೇವತೆಗಳನ್ನು ನಿಂದಿಸುವುದನ್ನು ಇಸ್ಲಾಂ ವಿರೋದಿಸುತ್ತದೆ. ಆದ್ದರಿಂದ ಹಿಂದೂ ಧರ್ಮದ ಅವಹೇಳನೆಯನ್ನು ನೈಜ ಮುಸಲ್ಮಾನ ಒಪ್ಪಲು ಸಾಧ್ಯವಿಲ್ಲ. ಮುಸ್ಲಿಂ ಸಮಾಜ ಸ್ವಾಮೀಜಿಯವರ ಈ ಹೇಳಿಕೆಯಿಂದ ಸಂತುಷ್ಟ ಗೊಳ್ಳುವುದಿಲ್ಲ ಎಂಬ ವಾಸ್ತವಾಂಶ ಸ್ವಾಮೀಜಿಯವರು ಮಣಗಾಣಲಿ.
ಪ್ರವಾದಿ ನಿಂದನೆ ವಿಶ್ವದ ಯಾವುದೇ ಮೂಲೆಯಲ್ಲಿ ನಡೆದರೂ ಜಾಗತಿಕವಾಗಿ ಮುಸ್ಲಿಮರು ಒಗ್ಗಟ್ಟಾಗಿ ಖಂಡಿಸುತ್ತಾರೆ. ಆದರೆ ಹಿಂದೂ ಧರ್ಮದ ಬಗ್ಗೆ ಕೆಲವು ಬುದ್ದಿ ಜೀವಿಗಳು ಅವಮಾನ ಮಾಡುವಾಗ ಸಮಾಜ ಒಗ್ಗಟ್ಟಾಗಿ ಖಂಡಿಸದೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅಪಮಾನಕ್ಕೀಡಾಗುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದು ರಹೀಂ ಉಚ್ವಿಲ್ ಸ್ವಾಮೀಜಿ ಯವರು ತನ್ನ ಹೇಳಿಕೆಗೆ ಕ್ಷಮೆ ಯನ್ನು ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.