Connect with us

    LATEST NEWS

    ಇನ್ಸ್ಟಾಗ್ರಾಂ ವಿಡಿಯೋಗಾಗಿ 68ನೇ ಮಹಡಿಯಲ್ಲಿ ಸಾಹಸ – ಕೆಳಗೆ ಬಿದ್ದು ಸಾವನಪ್ಪಿದ ಡೇರ್‌ಡೆವಿಲ್ ರೆಮಿ ಲುಸಿಡಿ

    ಹಾಂಕಾಂಗ್ ಜುಲೈ 31: ಗಗನಚುಂಬಿ ಕಟ್ಟಡದ ತುದಿಯಲ್ಲಿ ನಿಂತು ಸಾಹಸ ಮಾಡುತ್ತಿದ್ದ ಡೇರ್‌ಡೆವಿಲ್ ರೆಮಿ ಲುಸಿಡಿ ಸಾಹಸ ಮಾಡುವ ವೇಳೆ ಗಗನಚುಂಬಿ ಕಟ್ಟಡ ಬಿದ್ದು ಸಾವನಪ್ಪಿದ್ದಾನೆ. ಇನ್‌ಸ್ಟಾಗ್ರಾಮ್‌ನಲ್ಲಿ ‘ರೆಮಿ ಎನಿಗ್ಮಾ’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಡೇರ್‌ಡೆವಿಲ್ ರೆಮಿ ಲುಸಿಡಿ, ಎತ್ತರದ ಹಾಂಗ್ ಕಾಂಗ್ ಗಗನಚುಂಬಿ ಕಟ್ಟಡದ ಮೇಲಿನಿಂದ ಬಿದ್ದು ಸಾವನಪ್ಪಿದ್ದಾರೆ.


    30 ವರ್ಷ ವಯಸ್ಸಿನ ಥ್ರಿಲ್-ಸೀಕರ್ ಕಟ್ಟಡಗಳು, ಕ್ರೇನ್‌ಗಳು, ಸೇತುವೆಗಳು ಮೇಲೆ ವಿವಿಧ ರೀತಿಯ ಸಾಹಸಗಳನ್ನು ಮಾಡಿ ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.

    ಲುಸಿಡಿ ಅವರು ಫ್ರೆಂಚ್‌ ಡೇರ್ ಡೆವಿಲ್‌ ಎಂದೇ ಖ್ಯಾತಿ ಪಡೆದಿದ್ದರು. ಇವರು ಟ್ರೆಗುಂಟರ್ ಟವರ್ ಸಂಕೀರ್ಣ ಹತ್ತಿದ್ದ ವೇಳೆ ಬಿದ್ದಿದ್ದಾರೆ. ಅವರು ಕಾಲು ಜಾರಿ ಆಯತಪ್ಪಿ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳ ವರದಿ ಹೇಳಿದೆ. ಸಂಜೆ 6 ಗಂಟೆ ವೇಳೆಗೆ ಲುಸಿಡಿ ಅವರು 40ನೇ ಮಹಡಿಯಲ್ಲಿನ ಸ್ನೇಹಿತನನ್ನು ಭೇಟಿಯಾಗಲು ಬಂದಿರುವುದಾಗಿ ಸೆಕ್ಯುರಿಟಿ ಬಳಿ ಹೇಳಿದ್ದರು, ಸೆಕ್ಯುರಿಟಿ ತಡೆಯಲು ಯತ್ನಿಸಿದರೂ ಅಷ್ಟರಲ್ಲಿ ಅವರು ಕಟ್ಟಡದ ಒಳಗೆ ಪ್ರವೇಶಿಸಿದ್ದರು. 49ನೇ ಮಹಡಿಗೆ ಲುಸಿಡಿ ಬಂದು ನಂತರ ಮೆಟ್ಟಿಲುಗಳ ಮೂಲಕ ಕೊನೆಯ ಮಹಡಿಗೆ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಹಾಂಗ್‌ಕಾಂಗ್‌ ಅಧಿಕಾರಿಗಳು ತಿಳಿಸಿದ್ದಾರೆ.
    ಘಟನಾ ಸ್ಥಳದಲ್ಲಿ ಪೊಲೀಸರಿಗೆ ಲುಸಿಡಿ ಅವರ ಕ್ಯಾಮೆರಾ ದೊರಕಿದ್ದು, ಅದರಲ್ಲಿ ಎತ್ತರಕ್ಕೆ ಏರಿ ಅವರು ಸಾಹಸಗಳನ್ನು ಮಾಡಿದ ವಿಡಿಯೊಗಳು ದಾಖಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *