LATEST NEWS
ಮಂಗಳೂರಿನಲ್ಲಿ ಜನ ಪ್ರತಿನಿಧಿಗಳ ಭಾವಚಿತ್ರಕ್ಕೆ ಮಸಿ
ಮಂಗಳೂರಿನಲ್ಲಿ ಜನ ಪ್ರತಿನಿಧಿಗಳ ಭಾವಚಿತ್ರಕ್ಕೆ ಮಸಿ
ಮಂಗಳೂರು, ಸೆಪ್ಟೆಂಬರ್ 30 : ಮಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಫ್ಲೆಕ್ಸ್ ಹಾವಳಿ ಬಗ್ಗೆ ಪರಿಸರ ಹೋರಾಟಗಾರರು ಗರಂ ಆಗಿದ್ದಾರೆ.
ರಾಜ್ಯ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಹಾಕುವುದನ್ನು ನಿಷೇಧಿಸಿ, ಕಟ್ಟು ನಿಟ್ಟಿನ ಕಾನೂನ್ನು ಜಾರಿಗೆ ತಂದಿದೆ,
ಆದರೆ ಸ್ಥಳಿಯ ಆಡಳಿತಕ್ಕೆ ಫ್ಲೆಕ್ಸ್ ಹಾವಳಿ ತಡೆಯಲು ಸಾಧ್ಯವಾಗಿಲ್ಲ. ಕಾರಣ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.
ಕಾನೂನು ಜಾರಿಗೊಳಿಸಿದ ಜನ ಪ್ರತಿನಿಧಿಗಳೇ ಕಾನೂನು ಮುರಿದು ಎಲ್ಲೆಡೆ ತಮ್ಮ ಫ್ಲೆಕ್ಷ್ ಗಳನ್ನು ಹಾಕಿಕೊಂಡು ವಿಜ್ರಂಭಿಸುತಿದ್ದಾರೆ. ಇದನ್ನು ತಡೆಯಬೇಕಾದ ಕಾನೂನು ಪಾಲನೆ ಮಾಡಬೇಕಾದ ಅಧಿಕಾರಿ ವರ್ಗ ಕಣ್ಮುಚ್ಚಿ ಕೂತಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಮಂಗಳೂರಿನ ರಾಷ್ಟ್ರೀಯ ಪರಿಸರ ಹೋರಾಟಗಾರರ ವೇದಿಕೆಯ ಗ್ರೀನ್ ಆರ್ಮಿ ಸದಸ್ಯರು ಮಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಜನ ಪ್ರತಿನಿಧಿಗಳಿರುವ ಫ್ಲೆಕ್ಸ್ ಗಳಿಗೆ ಮಸಿ ಬಳಿಯುವ ಮೂಲಕ ತಮ್ಮ ಪ್ರತಿಭಟನೆಯನ್ನು ತೋರಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್, ಕಾಂಗ್ರೆಸ್ ನ ಮಾಜಿ ಶಾಸಕ ಜೆ. ಆರ್.ಲೊಬೋ, ಮಂಗಳೂರು ಪಾಲಿಕೆ ಮೇಯರ್ ಭಾಸ್ಕರ್ ಮೊಯಿಲಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಭಾವ ಚಿತ್ರಗಳಿರು ಫ್ಲೆಕ್ಸ್ಗಗಳಿಗೆ ಮಸಿ ಬಳಿದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ವಿಡಿಯೋಗಾಗಿ…