National
ಕೊರೊನಾ- ದೇಶದಲ್ಲಿ 52 ಶೇ. ಸೋಂಕಿತರು ರೋಗಮುಕ್ತ

ನವದೆಹಲಿ, ಜೂನ್ 16, ಒಂದೆಡೆ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಏರುತ್ತಿದ್ದರೆ, ಇನ್ನೊಂದೆಡೆ ರೋಗಮುಕ್ತಗೊಂಡು ಆಸ್ಪತ್ರೆಯಿಂದ ಹೊರಬರುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ದೇಶದಲ್ಲಿ 52.47 ಶೇಕಡಾದಷ್ಟು ರೋಗ ಪೀಡಿತರು ಗುಣಮುಖರಾಗಿದ್ದಾರೆ. ರಿಕವರಿ ರೇಟ್ 51.08 ರಷ್ಟು ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ 10,215 ಕೋವಿಡ್ ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಒಟ್ಟು 1,80,012 ಮಂದಿ ಸೋಂಕಿನಿಂದ ರೋಗಮುಕ್ತಗೊಂಡು ಹೊರಬಂದಿದ್ದಾರೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ರಿಕವರಿ ರೇಟ್ ಅಂಕಿಗಳು ದೇಶದಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಗುಣಮುಖರಾಗಿರುವುದನ್ನು ಸೂಚಿಸುತ್ತದೆ. ಸದ್ಯಕ್ಕೆ 1,53,178 ಮಂದಿ ಸಕ್ರಿಯ ಸೋಂಕಿತರಿದ್ದು, ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆಂದು ಮಾಹಿತಿ ನೀಡಿದೆ.

ದಿನದಲ್ಲಿ 3 ಲಕ್ಷ ಟೆಸ್ಟಿಂಗ್
ದೇಶಾದ್ಯಂತ ಕೊರೊನಾ ಶಂಕಿತರ ತಪಾಸಣೆ ಮುಂದುವರಿಸಲಾಗಿದೆ. ಈವರೆಗೆ 59,21,069 ಮಂದಿಯ ಸ್ಯಾಂಪಲನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಕಳೆದ 24 ಗಂಟೆಗಳಲ್ಲಿ 1,54,935 ಮಂದಿಯ ಸ್ಯಾಂಪಲ್ ಕಲೆಕ್ಟ್ ಮಾಡಲಾಗಿದೆ. ಸದ್ಯಕ್ಕೆ ದೇಶದಲ್ಲಿ ದಿನವೊಂದರಲ್ಲಿ ಮೂರು ಲಕ್ಷ ಮಂದಿಯನ್ನು ಟೆಸ್ಟಿಂಗ್ ಒಳಪಡಿಸಲಾಗುತ್ತಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.