Connect with us

LATEST NEWS

ಕತಾರ್‌ನಲ್ಲಿ ಮಾನವಿಯತೆ ಮೆರೆದ ಇಂಡಿಯನ್ ಸೋಷಿಯಲ್ ಫೋರಂ

ಕತಾರ್‌ನಲ್ಲಿ ಮಾನವಿಯತೆ ಮೆರೆದ ಇಂಡಿಯನ್ ಸೋಷಿಯಲ್ ಫೋರಂ

ದೋಹಾ, ನವೆಂಬರ್ 24 : ದೂರದ ಕೊಲ್ಲಿ ರಾಷ್ಟ್ರ ಕತಾರಿನಲ್ಲಿ ಇಂಡಿಯನ್ ಸೋಷಿಯಲ್ ಫೋರಂ ಕಾರ್ಯಕರ್ತರು ಮಾನವಿಯತೆ ಮೆರೆದು ಶಹಬ್ಬಾಸ್ ಹೇಳಿಸಿಕೊಂಡಿದ್ದಾರೆ.

ನವೆಂಬರ್ 22 ರ ಶುಕ್ರವಾರ ಕತಾರಿನ ಉಮ್ಮು ಜುಬಾರ್ ಎಂಬ ಸ್ಥಳದಲ್ಲಿ ಆಂಧ್ರ ಪ್ರದೇಶದ ಕಡಪ ನಿವಾಸಿಯಾದ ಶೇಕ್ ಮುಹಮ್ಮದ್ ಗೌಸ್ ರವರ ಪುತ್ರ 31 ವರ್ಷದ ಶೇಕ್ ಅಬ್ದುಲ್ ವದೂದ್ ರವರು ತಾಳಲಾರದ ಸಾಲದ ಬಾದೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಇವರು ಕಳೆದ 10 ವರ್ಷ ದಿಂದ ಒಂದು ಮನೆಯಲ್ಲಿ ಚಾಲಕನಾಗಿ ದುಡಿಯುತ್ತಿದ್ದು ಕೆಲವು ದಿನಗಳ ಮುಂಚೆ ಎಂದಿನಂತೆ ಅವನ ಮನೆಗೆ ಫೋನ್ ಮಾಡಿ ನನಗೆ ಇಲ್ಲಿ ತುಂಬಾ ಸಾಲವಿದೆ ಎಂದು ಮನೆಯವರಲ್ಲಿ ಹೇಳಿಕೊಂಡಿರುವುದಾಗಿ ವಿವರಗಳು ಲಭಿಸಿತ್ತು .

ತಾ 5-11-2018 ನೇ ಮಂಗಳವಾರ ದಂದು ಅವನು ಕೆಲಸ ಮಾಡುತಿದ್ದ ಸ್ವಲ್ಪ ದೂರದ ನಿರ್ಜನ ಪ್ರದೇಶದಲ್ಲಿ ನೇಣು ಬಿಗಿದು ಕೊಂಡಿರುವ ಸ್ಥಿತಿಯನ್ನು ಸಾರ್ವಜನಿಕರು ಕಂಡು ಕೂಡಲೇ ಪೋಲೀಸರ ಗಮನಕ್ಕೆ ತಂದು ಸಂಪೂರ್ಣ ಮಾಹಿತಿಯನ್ನು ವಿವರಿಸಿದ್ದರು.

ಮತ್ತು ಆತ್ಮ ಹತ್ಯೆ ಮಾಡಿಕೊಳ್ಳುವ ಒಂದು ವಾರದ ಮುಂಚೆ ಸಾಲಗಾರರ ಮುಂದೆ ತಪ್ಪಿಸಿ ಕೊಂಡಿದ್ದು ಇವನ ಮೇಲೆ ಕೇಸು ಕೂಡ ದಾಖಲಾಗಿತ್ತು.

ಸಾಮಾಜಿಕ ತಾಣವಾದ ವಾಟ್ಸಪ್ಪ್ ನಲ್ಲಿ ಇವನ ಮರಣದ ವಾರ್ತೆಯ ಸಂದೇಶವು ಹರಿದಾಡುತ್ತ ಇದ್ದು ಆ ಸಂದೇಶವನ್ನು ಗಮನಿಸಿದ ಕತಾರ್ ಇಂಡಿಯನ್ ಸೋಷಿಯಲ್ ಫೋರಂ ನ ಲತೀಫ್ ಮಡಿಕೇರಿ ಮತ್ತು ಅಬ್ದುಲ್ ಅಝೀಮ್ ಹೈದರಾಬಾದ್ ರವರು ಕೂಡಲೇ ಎಚ್ಚೆತ್ತುಕೊಂಡು ಕಾರ್ಯ ಪ್ರವೃತರಾಗಿ ವಿವರಗಳನ್ನು ಸಂಗ್ರಹಿಸಿ ಪೊಲೀಸ್ ಠಾಣೆ ಮತ್ತು ಶವಾಗಾರವನ್ನು ಸಂಪರ್ಕಿಸಿದಾಗ ಮೃತದೇಹವು ತುಂಬಾ ಕೊಳೆತ ಸ್ಥಿತಿಯಲ್ಲಿತ್ತು.

ಮತ್ತು ಅದನ್ನು ಊರಿಗೆ ಕೊಂಡುಹೋಗುವ ಸ್ಥಿತಿಯಲ್ಲಿ ಇಲ್ಲ ಎಂಬ ಮಾಹಿತಿಯೂ ದೊರಕಿತು.

ಕೂಡಲೇ ಅವರ ಕುಟುಂಬಸ್ಥರನ್ನು ಸಂಪರ್ಕಿಸಿ ವಿವರಗಳನ್ನು ನೀಡಿ ಅದಕ್ಕೆ ಬೇಕಾದಂತಹ ಎಲ್ಲಾ ದಾಖಲೆಗಳನ್ನು ಸ್ಥಳೀಯ ಪೊಲೀಸ್ ಠಾಣೆಯಿಂದ ಮತ್ತು ಭಾರತೀಯ ರಾಯಬಾರಿ ಕಚೇರಿಯಿಂದ , ಆಸ್ಪತ್ರೆಯಿಂದ ಮತ್ತು ಊರಿನಿಂದ ತರಿಸಿ ಕತಾರಿನ ಅಬೂ ಹಮೂರಿನ ಧಫನ ಭೂಮಿಯಲ್ಲಿ ದಫನ ವನ್ನು ಮಾಡಲಾಯಿತು.
ಈ ಬಗ್ಗೆ ಪ್ರತಿಕ್ರೀಯಿಸಿರುವ ಲತೀಫ್ ಮಡಿಕೇರಿ ಯವರು ಪ್ರವಾದಿ (ಸ.ಅ )ರವರ ಅನುಯಾಯಿಗಳಾದ ನಾವು ಇಂತಹ ಮನ ಸ್ಥಿತಿ ಯಿಂದ ದೂರ ಇರಬೇಕು ಮತ್ತು ಯಾವುದೇ ತೊಂದರೆಗಳು ಎದುರಾದಲ್ಲಿ ಆತ್ಮ ಹತ್ಯೆಯು ಪರಿಹಾರವಲ್ಲ. ಅವುಗಳೆಲ್ಲವನ್ನು ಧೈರ್ಯ್ಯದಿಂದ ಎದುರಿಸಬೇಕೆಂದು ಮನವಿ ಮಾಡಿದ್ದಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *