ರಾಮಮಂದಿರ ನಿರ್ಮಾಣಕ್ಕೆ ಮಂಗಳೂರಿನಲ್ಲಿ ಬೃಹತ್ ಜನಾಗ್ರಹ ಸಮಾವೇಶ : ಎಲ್ಲೆಡೆ ಕಟ್ಟೆಚರ

ಮಂಗಳೂರು, ನವೆಂಬರ್ 25 : ಅಯ್ಯೋಧೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ವಿ ಎಚ್ ಪಿ ಹಾಗು ಬಜರಂಗದಳ ಮಂಗಳೂರಿನಲ್ಲಿ ನಾಳೆ ಬೃಹತ್ ಜನಾಗೃಹ ಸಭೆಯನ್ನು ಆಯೋಜಿಸಿದೆ.

ಮಂಗಳೂರಿನ ಹೃದಯಭಾಗವಾದ ಕೇಂದ್ರ ಮೈದಾನಿನಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಈ ಸಮಾವೇಶವನ್ನು ಆಯೋಜಿಸಿದೆ.

ಜನಾಗ್ರಹ ಸಮಾವೇಶ ಯಶಸ್ವಿಯಾಗಲು ಅಗತ್ಯವಿರುವ ಎಲ್ಲಾ ಸಿದ್ದತೆಗಳು ಭರದಿಂದ ಸಾಗುತ್ತಿವೆ. ಈ ಬೃಹತ್ ಜನಾಗ್ರಹ ಸಭೆಗೆ 50 ಸಾವಿರಕ್ಕೂ ಮಿಕ್ಕಿ ಜನರು ಭಾಗವಹಿಸುವ ನಿರೀಕ್ಷೆ ಇದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಕಾಸರಗೋಡು, ಬೆಳ್ತಂಗಡಿ, ಸುಳ್ಯ , ಪುತ್ತೂರು, ಮೂಡಬಿದರೆ ಹಾಗೂ ನೆರೆ ಜಿಲ್ಲೆಯಾದ ಉಡುಪಿ, ಕಾಸರಗೋಡಿನಿಂದಲೂ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಈ ಜನಾಗ್ರಹ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಸಮಾವೇಶದ ಪೂರ್ವ ನಗರದ ಜ್ಯೋತಿ ವೃತ್ತದಿಂದ ಸಮಾವೇಶ ನಡೆಯುವ ಕೇಂದ್ರ ಮೈದಾನಿನ ವರೆಗೆ ಬೃಹತ್ ಜಾಥಾ ನಡೆಯಲಿದೆ.

ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಯ ಆರ್ ಎಸ್ ಹಿರಿಯ ಮುಖಂಡರು, ವಿವಿಧ ಮಠಾಧೀಶರು, ಸಾಧುಸಂತರು ಈ ಜನಾಗ್ರಹ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಜನಾಗ್ರಹ ಸಭೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಾಳೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

ನಾಳೆ ಮುಂಜಾನೆ 6 ರಿಂದ ತಡರಾತ್ರಿ 12 ರ ವರೆಗೆ ಮಂಗಳೂರು ತಾಲೂಕು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮದ್ಯದಂಗಡಿಗಳನ್ನು ಮುಚ್ಚಲು ಅವರು ಆದೇಶಿಸಿದ್ದಾರೆ.

ಕೋಮು ಸೂಕ್ಷ್ಮವಾದ ಮಂಗಳೂರಿನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಹೊರ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರನ್ನು ನಗರಕ್ಕೆ ಕರೆಸಲಾಗಿದ್ದು, ಸೂಕ್ಷ್ಮ ಮತ್ತು ಆಯಾ ಕಟ್ಟಿನ ಜಾಗಗಳಲ್ಲಿ ಹದ್ದಿನ ಕಣ್ಣಿಡಲಾಗಿದೆ.

Facebook Comments

comments