Connect with us

LATEST NEWS

ಅಮೇರಿಕದಲ್ಲಿ ಗುಂಡಿನ ದಾಳಿಗೆ ಭಾರತೀಯ ಮೂಲದ ವೈದ್ಯ ಬಲಿ..!

ವಾಷಿಂಗ್ಟನ್: ಅಮೇರಿಕದ ಅಲಬಾಮಾ ನಗರದ ಟುಸ್ಕಲುಸಾ ಎಂಬಲ್ಲಿ ನಡೆದ ಗುಂಡಿನ ದಾಳಿಯಲ್ಲಿ  ಭಾರತೀಯ ಮೂಲದ ಖ್ಯಾತ ವೈದ್ಯರೊಬ್ಬರುಬಲಿಯಾಗಿದ್ದಾರೆ.  ದಾಳಿಯಲ್ಲಿ ಡಾ.ರಮೇಶ್ ಬಾಬು ಪೆರಮಸೆಟ್ಟಿ ಸ್ಥಳದಲ್ಲೇ ಅಸು ನೀಗಿದರು ಎಂದು ತಿಳಿದು ಬಂದಿದೆ.

ಡಾ.ರಮೇಶ್ ಬಾಬು ಅಮೆರಿಕದಲ್ಲಿ ಹಲವು ಆಸ್ಪತ್ರೆಗಳನ್ನು ನಡೆಸುತ್ತಿರುವ ಖ್ಯಾತ ವೈದ್ಯರು.

ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯವರಾಗಿದ್ದ ಡಾ.ರಮೇಶ್, ಕ್ರಿಮ್ಸನ್ ನೆಟ್ವರ್ಕ್ ಹೆಸರಿನ ಸ್ಥಳೀಯ ವೈದ್ಯರ ಸಂಘಟನೆಯ ಸಂಸ್ಥಾಪಕ ಹಾಗೂ ವೈದ್ಯಕೀಯ ನಿರ್ದೇಶಕರಲ್ಲೊಬ್ಬರು. ಟುಸ್ಕಲೂಸಾದಲ್ಲಿ ವೈದ್ಯರಾಗಿಯೂ ಪ್ರಾಕ್ಟೀಸ್ ಮಾಡುತ್ತಿದ್ದ ಅವರು, ಆರೋಗ್ಯಕ್ಷೇತ್ರಕ್ಕೆ ನೀಡಿದ ಗಣನೀಯ ಕೊಡುಗೆಯಿಂದ ಖ್ಯಾತರಾಗಿದ್ದರು.

ಈ ಕ್ಷಣಕ್ಕೆ ತಿಳಿದುಬಂದಿರುವಂತೆ ಡಾ.ರಮೇಶ್ ಮೃತಪಟ್ಟಿರುವ ಬಗ್ಗೆ ಮಾಹಿತಿ ಇದೆ. ಶೋಕದಲ್ಲಿರುವ ಅವರ ಕುಟುಂಬದವರು ಸದ್ಯಕ್ಕೆ ಖಾಸಗಿತನ ಕೋರಿದ್ದಾರೆ. ಅವರ ಬಗ್ಗೆ ಅಪಾರ ಪ್ರೀತಿ ಹಾಗೂ ವಿಶ್ವಾಸವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಅವರು ನಮಗಾಗಿ ಏನು ಮಾಡಲು ಬಯಸಿದ್ದರೋ ಅದಕ್ಕಾಗಿ ಅವರನ್ನು ನಾವು ಮುಂದೆಯೂ ಗೌರವಿಸುತ್ತೇವೆ. ಅರ್ಥಮಾಡಿಕೊಂಡಿರುವುದಕ್ಕೆ ಧನ್ಯವಾದಗಳು” ಎಂದು ಕ್ರಿಮ್ಸನ್ ಕೇರ್ ನೆಟ್ವರ್ಕ್ ತಂಡ ಫೇಸ್ಬುಕ್ ಪೋಸ್ಟ್ ನಲ್ಲಿ ಹೇಳಿದೆ.

ಆರೋಗ್ಯ ಸೇವಾ ಕ್ಷೇತ್ರದಲ್ಲಿ 38 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿರುವ ಡಾ.ಪೆರಮಸೆಟ್ಟಿ ವಿಸ್ಕಿನ್ಸನ್ ಮೆಡಿಕಲ್ ಕಾಲೇಜು ಹಾಗೂ ವೆಂಕಟೇಶ್ವರ ಮೆಡಿಕಲ್ ಕಾಲೇಜಿನಿಂದ 1986ರಲ್ಲಿ ವೈದ್ಯಕೀಯ ಪದವಿ ಪಡೆದಿದ್ದರು. ಟುಸ್ಕಲೂಸಾ ಮತ್ತು ಇತರ ನಾಲ್ಕು ಕಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವರು, ತುರ್ತು ಚಿಕಿತ್ಸೆ ಮತ್ತು ಕುಟುಂಬ ವೈದ್ಯರಾಗಿ ಜನಪ್ರಿಯರಾಗಿದ್ದರು. ಮಕ್ಕಳ ಆರೋಗ್ಯ ಡಿಪ್ಲೋಮಾ ಪ್ರಾದೇಶಿಕ ವೈದ್ಯಕೀಯ ಕೇಂದ್ರದಲ್ಲೂ ತೊಡಗಿಸಿಕೊಂಡಿದ್ದರು.

ವೈದ್ಯವೃತ್ತಿಗೆ ಅವರು ನೀಡಿದ ಗಣನೀಯ ಕೊಡುಗೆಯನ್ನು ಗೌರವಿಸುವ ಉದ್ದೇಶದಿಂದ ನಗರದ ಪ್ರಮುಖ ಬೀದಿಯೊಂದಕ್ಕೆ ಅವರ ಹೆಸರನ್ನು ನಾಮಕರಣ ಮಾಡಲಾಗಿತ್ತು. ಕೋವಿಡ್-19 ಸಂದರ್ಭದಲ್ಲೂ ಅಪಾರ ಸೇವೆ ಸಲ್ಲಿಸಿದ್ದ ಇವರು ಇದಕ್ಕಾಗಿ ಪ್ರಶಸ್ತಿಯನ್ನೂ ಪಡೆದಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ.

ತಾವು ಓದಿದ ಆಂಧ್ರಪ್ರದೇಶದ ಮೇನಕೂರು ಹೈಸ್ಕೂಲ್ ಗೆ 14 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದ್ದರು ಹಾಗೂ ತಮ್ಮ ಹುಟ್ಟೂರಿನಲ್ಲಿ ಸಾಯಿ ದೇವಸ್ಥಾನ ನಿರ್ಮಾಣಕ್ಕೂ ನೆರವು ನೀಡಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *