LATEST NEWS
ಮುಂಬೈ – ಪ್ರಯಾಣಿಕರಿದ್ದ ಬೋಟ್ ಗೆ ನೌಕಾಪಡೆಯ ಸ್ಪೀಡ್ ಬೋಟ್ ಡಿಕ್ಕಿ – 13 ಮಂದಿ ನೀರು ಪಾಲು
ಮುಂಬೈ ಡಿಸೆಂಬರ್ 18: ಪ್ರಯಾಣಿಕರಿದ್ದ ಬೋಟ್ ಗೆ ನೌಕಾಪಡೆಯ ಸ್ಪೀಡ್ ಬೋಟ್ ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ಸಾವನಪ್ಪಿದ ಘಟನೆ ಗೇಟ್‌ವೇ ಆಫ್ ಇಂಡಿಯಾ ಬಳಿ ಸಮುದ್ರದಲ್ಲಿ ನಡೆದಿದೆ.
ಸಿಬ್ಬಂದಿ ಸೇರಿದಂತೆ ಸುಮಾರು 110ಕ್ಕೂ ಹೆಚ್ಚು ಪ್ರವಾಸಿಗರನ್ನು ಹೊತ್ತ ದೋಣಿಯು ಐಕಾನಿಕ್ ಗೇಟ್‌ವೇ ಆಫ್ ಇಂಡಿಯಾದಿಂದ ಯುನೆಸ್ಕೋ ಪರಂಪರೆಯ ಎಲಿಫೆಂಟಾ ದ್ವೀಪಕ್ಕೆ ತೆರಳುತ್ತಿದ್ದಾಗ ಸಂಜೆ 5.15ರ ಸುಮಾರಿಗೆ ಈ ಘಟನೆ ನಡೆದಿದೆ.
ಮೃತರ ಪೈಕಿ 10 ಮಂದಿ ಪ್ರಯಾಣಿಕರಿದ್ದು ಮೂವರು ನೌಕಾಪಡೆ ಸಿಬ್ಬಂದಿ ಎಂದು ತಿಳಿದುಬಂದಿದೆ. ನೌಕಾಪಡೆಯ ಸ್ಪೀಡ್ ಬೋಟ್ ನ ಎಂಜಿನ್ ಪರೀಕ್ಷೆ ವೇಳೆ ಈ ದುರ್ಘಟನೆ ಸಂಭವಿಸಿದೆ. ಕಾರಂಜಾದ ಉರಾನ್ ಬಳಿ ದೋಣಿ ‘ನೀಲ್ಕಮಲ್’ ದೋಣಿಗೆ ಸ್ಪೀಡ್ ಬೋಟ್ ಹೊಡೆದಿದೆ. ಸದ್ಯ 101 ಮಂದಿಯನ್ನು ರಕ್ಷಿಸಲಾಗಿದೆ. ದುರಂತದ ಬಗ್ಗೆ ಮಾಹಿತಿ ಪಡೆದ ಭಾರತೀಯ ನೌಕಾಪಡೆಯ ನಾಲ್ಕು ಹೆಲಿಕಾಪ್ಟರ್‌ಗಳು, ಮೆರೈನ್ ಪೊಲೀಸ್, ಇಂಡಿಯನ್ ಕೋಸ್ಟ್ ಗಾರ್ಡ್, ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರ, ಸ್ಥಳೀಯ ಮೀನುಗಾರರು ಮತ್ತು ಇತರ ದೋಣಿಗಳು ಪ್ರವಾಸಿಗರನ್ನು ರಕ್ಷಿಸಲು ಭಾರಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ.