LATEST NEWS
ಕರಾವಳಿ ತೀರದ ರಕ್ಷಣೆಗೆ ಕಣ್ಗಾವಲು ನೌಕೆ ಐಸಿಜಿಎಸ್ ವಿಕ್ರಮ್

ಕರಾವಳಿ ತೀರದ ರಕ್ಷಣೆಗೆ ಕಣ್ಗಾವಲು ನೌಕೆ ಐಸಿಜಿಎಸ್ ವಿಕ್ರಮ್
ಮಂಗಳೂರು ಮೇ 14: ಭಾರತೀಯ ತಟರಕ್ಷಣಾ ಪಡೆಗೆ ಐಸಿಜಿಎಸ್ ವಿಕ್ರಮ್ ಹೆಸರಿನ ನೂತನ ಅತ್ಯಾಧುನಿಕ ಗಸ್ತು ನೌಕೆ ಸೇರ್ಪಡೆಗೊಂಡಿದೆ. ಚೆನ್ನೈಯಲ್ಲಿ ಮೆಸರ್ಸ್ ಲಾರ್ಸನ್ ಆ್ಯಂಡ್ ಟರ್ಬೊ ಲಿ. ನಿರ್ಮಿಸಿದ ಈ ನೌಕೆ ನವ ಮಂಗಳೂರು ಬಂದರಿಗೆ ಆಗಮಿಸಿದ್ದು, ಶಾಸಕ ಬಿ.ಎ. ಮೊಯ್ದಿನ್ ಬಾವ ಬರಮಾಡಿಕೊಂಡರು.
ಕೋಸ್ಟ್ ಗಾರ್ಡ್ ಗೆ ಸೇರ್ಪಡೆಗೊಂಡಿರು ವಿಕ್ರಮ್ ನೌಕೆ ದಾಳಿ ಕಾರ್ಯಾಚರಣೆಗೆ ಅನುಕೂಲವಾಗವಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒಳಗೊಂಡಿದೆ. 98 ಮೀಟರ್ ಉದ್ದ, 15 ಮೀಟರ್ ಅಗಲ, 2140 ಟನ್ ಭಾರವಿದೆ. ಗಂಟೆಗೆ 24 ನಾಟಿಕಲ್ ಮೈಲ್ ಸಂಚರಿಸುವ ಈ ನೌಕೆ ಎರಡು ಇಂಜಿನ್ ಗಳ ಒಂದು ಹೆಲಿಕಾಪ್ಟರ್ ನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಅಲ್ಲದೆ 30 ಎಂಎಂ ಹಾಗೂ 12.7 ಎಂಎಂ ಗನ್, ಎರಡು ಅತ್ಯಾಧುನಿಕ ಸ್ಪೀಡ್ ಬೋಟ್ ಹೊಂದಿದೆ. ಅಗ್ನಿ ಅನಾಹುವ ವಿರುದ್ದ ಕಾರ್ಯಾಚರಣೆ, ಅಟೋಮ್ಯಾಟಿಕ್ ಪವರ್ ಮ್ಯಾನೆಜ್ ಮೆಂಟ್, ಸಮುದ್ರ ನೀರನ್ನು ಶುದ್ದೀಕರಿಸುವ ತಂತ್ರಜ್ಞಾನ ಇದರಲ್ಲಿದೆ.

ಭಾರತೀಯ ಭದ್ರತೆ ಮತ್ತು ಸುರಕ್ಷೆಯಲ್ಲಿ ಕೋಸ್ಟ್ ಗಾರ್ಡ್ ಮಹತ್ವದ ಪಾತ್ರ ವಹಿಸುತ್ತಿದೆ. ಸಮುದ್ರ ಮೂಲಕ ಕಳ್ಳ ಸಾಗಾಟ, ಭಯೋತ್ಪಾದನೆ, ಅಕ್ರಮ ವ್ಯವಹಾರ ನಿಯಂತ್ರಣ, ಮೀನುಗಾರರ ರಕ್ಷಣೆ, ಗಡಿ ಕಾಯುವ ಕೆಲಸವನ್ನು ಬದ್ಧತೆಯಿಂದ ಮಾಡುತ್ತಿದ್ದು, ಹೊಸ ನೌಕೆ ಸೇರ್ಪಡೆಯಿಂದ ಇನ್ನಷ್ಟು ಶಕ್ತಿ ಬಂದಂತಾಗಿದೆ ಎಂದು ಮೊಯ್ದಿನ್ ಬಾವ ಹೇಳಿದರು.