Connect with us

    LATEST NEWS

    ಮೀನು ಹಿಡಿಯುವ ಖಂಡಿಗೆ ಜಾತ್ರೆ

    ಮೀನು ಹಿಡಿಯುವ ಖಂಡಿಗೆ ಜಾತ್ರೆ

    ಸುರತ್ಕಲ್ ಮೇ 14: ಸುರತ್ಕಲ್ ಸಮೀಪದ ಖಂಡಿಗೆ ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದ ಜಾತ್ರಾ ಮಹೋತ್ಸವದಂದು ನಡೆಯುವ ಮೀನು ಹಿಡಿಯುವ ಜಾತ್ರೆ ನಡೆಯಿತು. ತುಳುನಾಡಿನಲ್ಲಿ ಎರ್ಮಾಳು ಜೆಪ್ಪು ಖಂಡೇವು ಅಡೆಪು ನಾಣ್ಣುಡಿ ಜಾರಿಯಲ್ಲಿದೆ.

    ಉಡುಪಿ ಜಿಲ್ಲೆಯ ಎರ್ಮಾಳು ದೇವಳದಲ್ಲಿ ಜಾತ್ರೆ ಪ್ರಾರಂಭಗೊಳ್ಳುವ ಮೂಲಕ ಅವಿಭಜಿತ ದ.ಕ. ಉಡುಪಿ ಜಿಲ್ಲೆಯಲ್ಲಿ ಜಾತ್ರೆಗಳು ಪ್ರಾರಂಭಗೊಂಡು ಖಂಡಿಗೆ ಶ್ರೀ ಧರ್ಮರಸು ಕ್ಷೇತ್ರದ ಜಾತ್ರೆಯೊಂದಿಗೆ ಎಲ್ಲಾ ಜಾತ್ರೆಗಳು ಮುಕ್ತಾಯವಾಗುತ್ತದೆ.

    ಚೇಳಾಯರು ಗ್ರಾಮದ ಖಂಡಿಗೆಯ ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಸು ಕ್ಷೇತ್ರವು ಪಾವಂಜೆಯ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಸಮೀಪ ನಂದಿನಿ ನದಿಯ ತಟದಲ್ಲಿದ್ದು ದೈವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ಪ್ರತಿ ವರ್ಷ ಮೇ ತಿಂಗಳಲ್ಲಿ ಬರುವ ವೃಷಭ ಸಂಕ್ರಮಣದಂದು ನಡೆಯುತ್ತದೆ.

    ಈ ನದಿಯಲ್ಲಿ ಮೀನು ಹಿಡಿಯುವ ಪದ್ದತಿ ಹಿಂದಿನಿಂದಲೂ ಬೃಹತ್ ಮಟ್ಟದಲ್ಲಿ ನಡೆದುಕೊಂಡು ಬಂದಿದೆ. ವೃಷಭ ಸಂಕ್ರಮಣದಂದು ಬೆಳಿಗ್ಗೆ 7 ರ ಸುಮಾರಿಗೆ ದೈವಸ್ಥಾನದಲ್ಲಿ ದೈವಸ್ಥಾನಕ್ಕೆ ಸಂಭಂದ ಪಟ್ಟವರು ದೈವಕ್ಕೆ ಪ್ರಾಥನೆ ಸಲ್ಲಿಸಿ ನಂದಿನಿ ನದಿಯ ದಡಕ್ಕೆ ಆಗಮಿಸಿ ನದಿಗೆ ಪ್ರಸಾದ ಹಾಕಲಾಗುತ್ತದೆ ಅದೇ ಸಂದರ್ಭ ಸುಡು ಮದ್ದು ಸಿಡಿಸಲಾಗುತ್ತದೆ ತಕ್ಷಣ ಮೀನು ಹಿಡಿಯಲು ಬಂದ ಜನರು ನದಿಗೆ ಧುಮುಕಿ ಮೀನು ಹಿಡಿಯಲು ತೊಡಗುತ್ತಾರೆ.

    ಬೆಳಿಗ್ಗೆ 7 ಗಂಟೆಯಿಂದ ಮದ್ಯಾಹ್ನದವರೆಗೂ ಮೀನು ಹಿಡಿಯುದರಲ್ಲಿ ನಿರತರಾಗಿರುತ್ತಾರೆ, ಹಿಡಿದ ಮೀನನ್ನು ಮನೆಗೆ ತೆಗೆದು ಕೊಂಡು ಹೋಗಿ, ಸತ್ತ ತಮ್ಮ ಪ್ರೇತಾತ್ಮಗಳಿಗೆ ಬಡಿಸುವ ಕ್ರಮ ಇಲ್ಲಿಯದು, ಇದು ಈಗಲೂ ಹೆಚ್ಚಿನ ಮನೆಗಳಲ್ಲಿ ಆಚರಿಸಿಕೊಂಡೂ ಬರುತ್ತಿದ್ದಾರೆ, ಕೆಲವರು ವ್ಯಾಪಾರದ ದ್ರಷ್ಟಿಯಿಂದ ಇಲ್ಲಿ ಹಿಡಿದ ಮೀನನ್ನು ಇಲ್ಲಿಯೇ ಮಾರುತ್ತಾರೆ.

    ವರ್ಷದಲ್ಲಿ ಒಂದು ದಿನ ಇಲ್ಲಿನ ಮೀನನ್ನು ಪದಾರ್ಥ ಮಾಡಿ ತಿನ್ನುವುದೇ ಇಲ್ಲಿನ ದೈವದ ಪ್ರಸಾದವೆಂದು ಇಲ್ಲಿನ ಭಕ್ತರು ನಂಬುವುದರಿಂದ ಜಾತ್ರೆಗೆ ವಿಶೇಷ ಪ್ರಾಮುಖ್ಯತೆ ದೊರೆತಿದೆ, ಅಲ್ಲದೆ ಇಲ್ಲಿನ ಮೀನು ಅತ್ಯಂತ ರುಚಿಕರವಾಗಿರುತ್ತದೆ. ಮೇಷ ಸಂಕ್ರಮಣ ದಿಂದ ವ್ರಷಭ ಸಂಕ್ರಮಣದ ತನಕ ಇಲ್ಲಿ ಮೀನು ಹಿಡಿಯಲು ನಿಷೇದವಿದೆ, ಮೇಷ ಸಂಕ್ರಮಣದಂದು ನದಿಗೆ ಪ್ರಸಾದ ಹಾಕಿದ ನಂತರ ಇಲ್ಲಿ ಮೀನು ಹಿಡಿಯುದನ್ನು ನಿಲ್ಲಿಸಲಾಗುತ್ತದೆ, ಇದನ್ನು ಮೀರಿ ನಡೆಯುವಂತಿಲ್ಲ, ಈ ಹಿಂದೆ ಈ ನಂಬಿಕೆಯನ್ನು ಮೀರಿ ಮೀನು ಹಿಡಿದ ಪರಿಣಾಮ ಮೀನು ಹಿಡಿಯುತ್ತಿದ್ದ ಬಲೆಯಲ್ಲಿ ನಾಗರಹಾವು ಬಂದ ಉದಾಹರಣೆಗಳಿವೆಯಂತೆ.

    Share Information
    Advertisement
    Click to comment

    You must be logged in to post a comment Login

    Leave a Reply