Connect with us

LATEST NEWS

ದೇವರ ಹೆಸರಿನಲ್ಲಿ ಈ ಯುದ್ಧದ ಹತ್ಯಾಕಾಂಡ ನಿಲ್ಲಿಸಿ – ಪೋಪ್ ಫ್ರಾನ್ಸಿಸ್ ಮನವಿ

ವ್ಯಾಟಿಕನ್: 18 ದಿನಗಳಿಂದ ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಆಕ್ರಮಣಕಾರಿ ದಾಳಿಗೆ ಪೋಪ್ ಫ್ರಾನ್ಸಿಸ್ ಅಸಮಧಾನ ಹೊರ ಹಾಕಿದ್ದು, ಯುದ್ಧವನ್ನು ಕೊನೆಗೊಳಿಸಿ ಎಂದು ಪೋಪ್ ಫ್ರಾನ್ಸಿಸ್ ಇಂದು ಮನವಿ ಮಾಡಿದರು.


ಏಂಜೆಲಸ್ ಪ್ರಾರ್ಥನೆಯ ನಂತರ ಮಾತನಾಡಿದ ಅವರು, ನಾವು ವರ್ಜಿನ್ ಮೇರಿಗೆ ಪ್ರಾರ್ಥಿಸಿದ್ದೇವೆ. ಆಕೆಯ ಹೆಸರನ್ನು ಹೊಂದಿರುವ ನಗರವು ಮಾರಿಯುಪೋಲ್ ಉಕ್ರೇನ್ ನಾಶಪಡಿಸಿಕೊಳ್ಳಲು ಭೀಕರ ಯುದ್ಧ ನಡೆಯುತ್ತಿದೆ. ಪರಿಣಾಮ ಉಕ್ರೇನ್ ಹುತಾತ್ಮರ ನಗರವಾಗಿ ಮಾರ್ಪಟ್ಟಿದೆ ಎಂದು ನೆನಪಿಸಿಕೊಂಡರು.


ಮಕ್ಕಳು, ಮುಗ್ಧರು ಮತ್ತು ನಿರಾಯುಧ ನಾಗರಿಕರ ಬರ್ಬರ ಹತ್ಯೆ ಭಯಾನಕತೆಯನ್ನು ತಿಳಿಸುತ್ತೆ. ಪೂರ್ತಿ ನಗರಗಳನ್ನು ಸ್ಮಶಾನವಾಗಿ ಮಾಡುವ ಮೊದಲು ಅಪಾಯಕಾರಿ ಶಸ್ತ್ರಗಳನ್ನು ಕೊನೆಗೊಳಿಸಬೇಕು. ಮಕ್ಕಳು ಮತ್ತು ನಾಗರಿಕರನ್ನು ಕೊಲ್ಲುವ ‘ಅನಾಗರಿಕತೆ’ಯನ್ನು ನಾನು ಖಂಡಿಸುತ್ತೇನೆ. ದೇವರ ಹೆಸರಿನಲ್ಲಿ ಈ ಹತ್ಯಾಕಾಂಡವನ್ನು ನಿಲ್ಲಿಸಿ ಎಂದು ಮನವಿ ಮಾಡಿಕೊಂಡರು.

Advertisement
Click to comment

You must be logged in to post a comment Login

Leave a Reply