LATEST NEWS
ಅಕ್ರಮವಾಗಿ ವಿದೇಶಿ ಕರೆನ್ಸಿ ಸಾಗಾಟಕ್ಕೆ ಯತ್ನ ಓರ್ವನ ಬಂಧನ

ಅಕ್ರಮವಾಗಿ ವಿದೇಶಿ ಕರೆನ್ಸಿ ಸಾಗಾಟಕ್ಕೆ ಯತ್ನ ಓರ್ವನ ಬಂಧನ
ಮಂಗಳೂರು ಫೆಬ್ರವರಿ 16: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ವಿದೇಶಿ ಕರೆನ್ಸಿ ಸಾಗಾಟಕ್ಕೆ ಯತ್ನಿಸಿದ್ದ ವ್ಯಕ್ತಿಯನ್ನು ಕಸ್ಟಮ್ಸ್ ವಿಭಾಗದ ಡಿಆರ್ ಐ ಅಧಿಕಾರಿಗಳು ಬಂಧಿಸಿದ್ದಾರೆ.
ಮಂಗಳೂರಿನ ಕಸ್ಟಮ್ಸ್ ವಿಭಾಗದ ಡಿ ಆರ್ ಐ ಅಧಿಕಾರಿಗಳು ಮಹತ್ವದ ಕಾರ್ಯಚರಣೆ ನಡೆಸಿ ಭಾರಿ ಪ್ರಮಾಣದ ವಿದೇಶಿ ಕರೆನ್ಸಿ ಗಳ ಅಕ್ರಮ ಸಾಗಾಟ ಯತ್ನ ವನ್ನು ವಿಫಲಗೊಳಿಸಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ದುಬೈ ಗೆ ಸಾಗಿಸಲು ಯತ್ನಿಸುತ್ತಿದ್ದ 25.82 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಗಳನ್ನು ಡಿ ಆರ್ ಐ ಅಧಿಕಾರಿಗಳ ವಶಪಡಿಸಿ ಕೊಂಡಿದ್ದು ಕೇರಳದ ಕಾಸರಗೋಡು ನಿವಾಸಿ ಯೊಬ್ಬನನ್ನು ಬಂಧಿಸಿದ್ದಾರೆ.

ಮಂಗಳೂರಿನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಮೂಲಕ ದುಬೈ ಗೆ ತೆರಳಲು ವಿಮಾನ ನಿಲ್ದಾಣ ಕ್ಕೆ ಬಂದಿದ್ದ ಕೇರಳ ಕಾಸರಗೋಡು ಮೂಲದ ಸಿರಾಜುದ್ದಿನ್ ಪಲ್ಲಿಕೆ ಎಂಬವರ ವರ್ತನೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಡಿ ಆರ್ ಐ ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಸಿರಾಜುದ್ದಿನ್ ಪಲ್ಲಿಕೆ ಅವರ ಸೋಕ್ಸ್ ಹಾಗು ಬ್ಯಾಗ್ ನಲ್ಲಿ ಅಡಗಿಸಿ ಇಡಲಾಗಿದ್ದ ವಿದೇಶಿ ಕರೆನ್ಸಿ ಪತ್ತೆಯಾಗಿದೆ. ಸಿರಾಜುದ್ದೀನ್ ಅವರಿಂದ ಅಮೆರಿಕಾ ಡಾಲರ್ , ಸ್ವಿಸ್ ಫ್ರೆಂಕ್ , ಯೂರೋಸ್ , ಕುವೈಟ್ ದಿನಾರ್ ಸೇರಿದಂತೆ ಒಟ್ಟು 25.82 ಲಕ್ಷ ರೂಪಾಯಿ ಮೌಲ್ಯದ ಕರೆನ್ಸಿ ಯನ್ನು ಡಿ ಅರ್ ಐ ಅಧಿಕಾರಿಗಳು ವಶಪಡಿಸಿ ಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿರಾಜುದ್ದೀನ್ ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಲಾಗಿದೆ.