LATEST NEWS
ಅಕ್ರಮ ಮರಳುಗಾರಿಕೆ ಪ್ರಕರಣ ಕೋಟ ಪೊಲೀಸ್ ಠಾಣಾ ಎಸ್ ಐ ಗುರುನಾಥ ಹಾದಿಮನಿ ಸಸ್ಪೆಂಡ್
ಉಡುಪಿ ಸೆಪ್ಟೆಂಬರ್ 13: ಕರ್ತವ್ಯಲೋಪ ಎಸಗಿದ ಆರೋಪದ ಮೇರೆಗೆ ಪೊಲೀಸರ ಮೇಲೆ ಇಲಾಖಾ ಶಿಸ್ತು ಕ್ರಮಕ್ಕೆ ಮುಂದಾಗಿರುವ ಉಡುಪಿ ಜಿಲ್ಲಾ ಎಸ್ಪಿ ಡಾ. ಅರುಣ್ ಕೆ ನಾಲ್ವರು ಎಸ್ಐ ಸೇರಿದಂತೆ 80ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ. ಅದರಲ್ಲಿ ಕೋಟ ಪೊಲೀಸ್ ಠಾಣಾ ಎಸ್ ಐ ಗುರುನಾಥ ಹಾದಿಮನಿ ಅವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಅರುಣ್ . ಕೆ ಆದೇಶಿಸಿದ್ದಾರೆ. ಅಕ್ರಮ ಮರಳುಗಾರಿಕೆ ಪ್ರಕರಣವೊಂದರ ಸಂಬಂಧ ವರಿಷ್ಠಾಧಿಕಾರಿಗಳು, ಅಮಾನತು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯದಲ್ಲಿದ್ದ 4 ಮಂದಿ ಎಸ್‌ಐಗಳಾದ ಗುರುನಾಥ ಹಾದಿಮನೆ, ಶಂಭುಲಿಂಗ, ಅಶೋಕ್ , ಸುಷ್ಮಾ ಅಮಾನತು ಮಾಡಲಾಗಿದ್ದು, ಈ ಪೈಕಿ ಕೆಲವು ಮಂದಿಯ ಅಮಾನತು ಆದೇಶ ಮುಕ್ತಾಯಗೊಂಡಿದ್ದು, ಹಿಂದೆ ಸೇವೆ ಸಲ್ಲಿಸುತ್ತಿದ್ದ ಠಾಣೆ ಬಿಟ್ಟು ಬೇರೆ ಠಾಣೆಗಳಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದಾರೆ.
ಪೊಲೀಸ್ ಕರ್ತವ್ಯ ಹೊರತುಪಡಿಸಿ, ಇತರ ಕರ್ತವ್ಯ ನಡೆಸಿ ಇಲಾಖಾ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಕೆಲವರ ಮೇಲೆ ಈಗಾಗಲೇ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ. ಈ ಪ್ರಕ್ರಿಯೆ ನಿರಂತರ ಜಾರಿಯಲ್ಲಿರಲಿದೆ. ಪೊಲೀಸರು ಕಾನೂನು ಸುವ್ಯವಸ್ಥೆಗೆ ಒತ್ತು ನೀಡುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಎಸ್ ಪಿ ಮಾಹಿತಿ ನೀಡಿದ್ದಾರೆ.
You must be logged in to post a comment Login