LATEST NEWS
ಅಕ್ರಮ ಮರಳುಗಾರಿಕೆ ತಡೆಯಲು ಸ್ವತಃ ಫಿಲ್ಡ್ ಗೆ ಇಳಿದ ಪೊಲೀಸ್ ಆಯುಕ್ತ
ಮಂಗಳೂರು ಫೆಬ್ರವರಿ 28: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ದ ಸ್ವತಃ ಪೊಲೀಸ್ ಕಮಿಷನರ್ ಫೀಲ್ಡ್ ಗೆ ಇಳಿದಿದ್ದು, ಬೈಕ್‍ನಲ್ಲಿ ತೆರಳಿ ಡಿಸಿಪಿ ಜೊತೆ ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ಲಾರಿಯನ್ನು ತಡೆದಿರುವ ಘಟನೆ ನಿನ್ನೆ ಮಧ್ಯರಾತ್ರಿ ಮಂಗಳೂರಿನಲ್ಲಿ ನಡೆದಿದೆ.
ಕೇರಳಕ್ಕೆ ಲಾರಿ ಮೂಲಕ ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಲಾರಿಯನ್ನು ಬೈಕ್ ಮೂಲಕ ಹಿಂಬಾಲಿಸಿ ಮಂಗಳೂರಿನ ಕೇರಳ ಕರ್ನಾಟಕ ಗಡಿ ಭಾಗದ ತಲಪಾಡಿ ಟೋಲ್ ಗೇಟ್ ಬಳಿ ತಡೆದಿದ್ದಾರೆ.
ಸದ್ಯ ಮರಳು ಲಾರಿಗೆ ಎಸ್ಕಾರ್ಟ್ ನೀಡುತ್ತಿದ್ದ ಚಂದ್ರ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮರಳು ಲಾರಿಯನ್ನು ಸೀಝ್ ಮಾಡಿದ್ದಾರೆ. ಘಟನೆ ಸಂಬಂಧಿಸಿದಂತೆ ಅಕ್ರಮ ಮರಳು ಸಾಗಾಟ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ಎರಡು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ತಲಪಾಡಿ ಟೋಲ್ ಗೇಟ್‍ನ ಸಿಸಿಟಿವಿ ಕ್ಯಾಮೆರಾದಲ್ಲಿ ಪೊಲೀಸರು ನಡೆಸಿಸದ ಮಿಡ್ ನೈಟ್ ಅಪರೇಷನ್ ದೃಶ್ಯ ಸೆರೆಯಾಗಿದೆ.